ಬೆಂಗಳೂರು: ರಾಜ್ಯದಲ್ಲಿ ‘ಒಮಿಕ್ರಾನ್’ ವೈರಾಣು ಹಾವಳಿ ತಲ್ಲಣ ಸೃಷ್ಟಿಸುತ್ತಿದ್ದಂತೆಯೇ ರಾಜ್ಯ ಸರ್ಕಾರ ನಿಯಮಾವಳಿಯನ್ನು ಬಿಗಿಗೊಳಿಸಿದೆ.
ದೆಹಲಿ ಪ್ರವಾಸದಿಂದ ಬೆಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ನಾಯಿ ಅವರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಇಂದು ಮಹತ್ವದ ಸಭೆ ನಡೆಸಿದರು. ಸೋಂಕು ನಿಯಂತ್ರಣ ಸಂಬಂಧ ಬಿಗಿ ನಿಯಮ ಜಾರಿಗೊಳಿಸುವ ಸಂಬಂಧ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಕಂದಾಯ ಸಚಿವ ಆರ್ ಅಶೋಕ್, ವಿಮಾನ ನಿಲ್ದಾಣಗಳಲ್ಲಿ ಪ್ರತಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಪರೀಕ್ಷೆ ವರದಿ ಬಂದ ನಂತರವೇ ಪ್ರಯಾಣಿಕರನ್ನು ಹೊರಗೆ ಬಿಡಲಾಗುವುದು ಎಂದರು.
ಮಾರ್ಗಸೂಚಿಯ ಪ್ರಮುಖ ಅಂಶಗಳು ಹೀಗಿವೆ:
- ಸಿನಿಮಾ ಹಾಲ್, ಮಾಲ್ ಗಳಿಗೆ ಪ್ರವೇಶಿಸುವವರಿಗೆ ಕಡ್ಡಾಯ ರೂಲ್ಸ್. ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ನಿಯಮ ಜಾರಿ.
- ಶಾಲೆಗೆ ತೆರಳುವ ಹೆತ್ತವರು ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಲೇಬೇಕು.
- ಶಾಲೆ ಕಾಲೇಜುಗಳಲ್ಲಿ ಯಾವುದೇ ಸಮಾರಂಭ ನಡೆಸಲು ಅವಕಾಶವಿಲ್ಲ.
- ಶಾಲೆಗಳಲ್ಲಿ ಕೆಲಸ ಮಾಡುವವರು ಮತ್ತು ಮಕ್ಕಳ ಪೋಷಕರು 2 ಡೋಸ್ ಕಡ್ಡಾಯವಾಗಿ ಪಡೆದರಬೇಕು. 2 ಡೋಸ್ ಲಸಿಕೆ ಪಡೆಯದ ಪೋಷಕರ ಮಕ್ಕಳಿಗೆ ಶಾಲೆ ಪ್ರವೇಶಕ್ಕೆ ನಿರ್ಬಂಧ
- ಮದುವೆ ಸಮಾರಂಭಗಳಲ್ಲಿ ಜನ ಜಮಾಯಿಸುವುದಕ್ಕೆ ಅಂಕುಶ. 500 ಜನರಿಗೆ ಮಾತ್ರ ಅವಕಾಶ.