ಬೆಂಗಳೂರು: ಚಿನಾವಣೆ ಹೊತ್ತಲ್ಲಿ ಪ್ರದೇಶ ಕಾಂಗ್ರೆಸ್‌ಗೆ ಮೇಜರ್ ಸರ್ಜರಿ ಮಾಡಲಾಗಿದೆ. ಮಹತ್ವದ ತೀರ್ಮಾನವೊಂದರಲ್ಲಿ ಕೆಪಿಸಿಸಿಗೆ ನಾಲ್ಚರು ಹೊಸ ಕಾರ್ಯಾಧ್ಯಕ್ಷರನ್ನು ಹೈಕಮಾಂಡ್ ನೇಮಕ ಮಾಡಿದೆ. ಸಂಸದ ಜಿ.ಸಿ.ಚಂದ್ರಶೇಖರ್, ಶಾಸಕರಾದ ಮಂಜುನಾಥ್ ಭಂಡಾರಿ, ವಿನಯ್ ಕುಲಕರ್ಣಿ ಅವರಿಗೆ ಪ್ರದೇಶ ಕಾಂಗ್ರೆಸ್‌ನಲ್ಲಿ ಉನ್ನತ ಜವಾಬ್ಧಾರಿ ಸಿಕ್ಕಿದೆ. ಈ ನಾಯಕರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿರುವ ಹೈಕಮಾಂಡ್, ಪ್ರಚಾರ ಸಮಿತಿಗೂ ನಾಯಕರನ್ನು ನೇಮಕ ಮಾಡಿದೆ.
ನೂತನ ಪದಾಧಿಕಾರಿಗಳ ಪಟ್ಟಿ ಹೀಗಿದೆ:
-
ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರು: ತನ್ವೀರ್ ಸೇಠ್, ಜಿ.ಸಿ.ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್.
-
ಪ್ರಚಾರ ಸಮಿತಿ ಅಧ್ಯಕ್ಷರು: ವಿನಯ ಕುಮಾರ್ ಸೊರಕೆ ನೇಮಕ.
-
ಪ್ರಚಾರ ಸಮಿತಿ ಕೋ ಚೇರ್ಮನ್: ಎಲ್.ಹನುಮಂತಯ್ಯ
-
ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರು ರಿಜ್ವಾನ್ ಅರ್ಷದ್