ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ ಆರ್.ವಿ. ದೇವರಾಜ್ (67) ಅವರು ವಿಧಿವಶರಾಗಿದ್ದಾರೆ.
ಡಿಸೆಂಬರ್ 3ರಂದು ತಮ್ಮ ಜನ್ಮದಿನದ ಪ್ರಯುಕ್ತ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿದ್ದ ವೇಳೆ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ದೇವರಾಜ್ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಆರ್.ವಿ. ದೇವರಾಜ್ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಹಿರಿಯ ನಾಯಕರು ಮಾಜಿ ಶಾಸಕ ಶ್ರೀ ಆರ್. ವಿ. ದೇವರಾಜ್ ನಿಧಾನ ಬಗ್ಗೆ ಕಾಂಗ್ರೆಸ್ ನಾಯಕ ಹೆಚ್.ಎಂ.ರೇವಣ್ಣ ದುಃಖ ವ್ಯಕ್ತಪಡಿಸಿದ್ದಾರೆ. ಪಕ್ಷದ ತತ್ವಗಳಿಗೆ ಅಚಲ ಬದ್ಧತೆ, ಜನಪರ ನಿಲುವು ಮತ್ತು ನೆಲಬದ್ಧ ರಾಜಕೀಯವೇ ಅವರ ಬದುಕಿನ ಗುರುತು ಎಂದು ಸಾಮಾಜಿಕ ಮಾಧ್ಯಮ ‘X’ನಲ್ಲಿ ಬರೆದುಕೊಂಡಿರುವ ರೇವಣ್ಣ, ಈ ದುಃಖದ ಕ್ಷಣದಲ್ಲಿ ಅವರ ಕುಟುಂಬದವರಿಗೆ, ಹಾಗೂ ಅಭಿಮಾನಿ ಬಂಧುಗಳಿಗೆ ದುಃಖವನ್ನು ಬರಿಸುವ ಶಕ್ತಿ ನೀಡಲಿ ಎಂದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರು ಮಾಜಿ ಶಾಸಕ ಶ್ರೀ ಆರ್. ವಿ. ದೇವರಾಜ್ ಅವರ ಅಗಲಿಕೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ.
ಪಕ್ಷದ ತತ್ವಗಳಿಗೆ ಅಚಲ ಬದ್ಧತೆ, ಜನಪರ ನಿಲುವು ಮತ್ತು ನೆಲಬದ್ಧ ರಾಜಕೀಯವೇ ಅವರ ಬದುಕಿನ ಗುರುತು.
ಈ ದುಃಖದ ಕ್ಷಣದಲ್ಲಿ ಅವರ ಕುಟುಂಬದವರಿಗೆ, ಹಾಗೂ ಅಭಿಮಾನಿ ಬಂಧುಗಳಿಗೆ ದುಃಖವನ್ನು ಬರಿಸುವ ಶಕ್ತಿ ನೀಡಲಿ pic.twitter.com/UupGn31gCk
— H M Revanna (@HMRevanna) December 2, 2025





















































