ಉಡುಪಿ: ಕರಾವಳಿಯ ಮತ್ಯೋದ್ಯಮಕ್ಕೆ ರಾಜ್ಯ ಸರ್ಕಾರದ ಯೋಜನೆ ಮತ್ತಷ್ಟು ವರದಾನವಾಗಿದೆ. ಕಾರಾವಳಿಯ ಮೀನುಗಾರರ ಬಹುಕಾಲದ ಯೋಜನೆಯಾಗಿರುವ ಹೆಜಮಾಡಿಕೋಡಿ ಮೀನುಗಾರಿಕಾ ಬಂದರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಎರಡು ದಿನಗಳ ಉಡುಪಿ ಭೇಟಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕಾಪು ತಾಲೂಕಿನ ಹೆಜಮಾಡಿ ಕೊಡಿಯಲ್ಲಿ ಮೀನುಗಾರಿಕೆ ಬಂದರು ಯೋಜನೆಯ ಕಾಮಗಾರಿಗೆ ಮುನ್ನುಡಿ ಬರೆದರು. ಸುಮಾರು 180.8 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಮೀನುಗಾರಿಕೆ ಇಲಾಖೆ ಅಧೀನದಲ್ಲಿರುವ ಸುಮಾರು 70 ಎಕರೆ ಜಾಗದಲ್ಲಿ ಮೀನುಗಾರಿಕೆ ಬಂದರು ತಲೆ ಎತ್ತಲಿದೆ.
ಸುಸಜ್ಜಿತ ಮೀನುಗಾರಿಕಾ ಜಟ್ಟಿ, ಬ್ರೇಕ್ ವಾಟರ್ ಸೌಲಭ್ಯ, ಬೋಟ್ ರಿಪೇರಿ ಶೆಡ್, ಹರಾಜು ಮಳಿಗೆ, ವರ್ಕ್ ಮನ್ ಶೆಡ್ ಸೇರಿದಂತೆ ಸುಸಜ್ಜಿತ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ಯೋಜನೆ ಪರಿಪೂರ್ಣವಾದ ನಂತರ ಇದು ಸರ್ವಋತು ಮೀನುಗಾರಿಕಾ ಬಂದರು ಎನಿಸಲಿದೆ.
ಈ ಕುರಿತಂತೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
https://mobile.twitter.com/CMofKarnataka/status/1351395403594285061