ಬೆಂಗಳೂರು: ವಾಹನ ಚಾಲಕರಿಗೆ ಸಾರಿಗೆ ಇಲಾಖೆ ಹಾಗೂ ಪೊಲೀಸರಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. ಇನ್ನು ಮುಂದೆ 130 ಕಿಮೀ ವೇಗದಲ್ಲಿ ವಾಹನ ಓಡಿಸಿದರೆ ಕ್ರಿಮಿನಲ್ ಕೇಸ್ ದಾಖಲಾಗಲಿದೆ.
ಈ ಕುರಿತಂತೆ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮಾಹಿತಿ ಒದಗಿಸಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಒಂದೇ ದಿನ 155 ಮಂದಿ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ130 ಕಿಮೀ ವೇಗದಲ್ಲಿ ವಾಹನ ಓಡಿಸಿ ಸಿಕ್ಕಿಬಿದ್ದರೆ ಅಂಥವರ ವಿರುದ್ಧ FIR ದಾಖಲಾಗಲಿದೆ. ಈ ನಿಯಮ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ದುಡುಕಿನ ಮತ್ತು ಅಪಾಯಕಾರಿ ಚಾಲನೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
Over speeding causes 90% of fatal accidents
On Bangalore-Mysore Highway yesterday 155 persons sped at more than 130 Kmph
Recording Spot & Sectional Speed both
From 1st Aug FIR to be registered for Vehicles driving above 130 Kmph anywhere in Karnataka,for rash & dangerous driving pic.twitter.com/yg7t7j8RrT— alok kumar (@alokkumar6994) July 26, 2024