ದೆಹಲಿ: ದೆಹಲಿಯಲ್ಲಿ ರೈತರ ಹೋರಾಟ ತೀವ್ರಗೊಂಡಿದ್ದು ಅನ್ನದಾತರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಇಂದು ಭಾರತ ಬಂದ್ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಈ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ವೇಳೆ, ರೈತರ ಹೋರಾಟ ಹಿನ್ನೆಲೆಯಲ್ಲಿ MSP ಖರೀದಿ ಗ್ಯಾರಂಟಿ, ರೈತರ ಸಾಲ ಮನ್ನಾ, ರೈತರಿಗೆ ಪಿಂಚಣಿ, ಮತ್ತಿತರ ಯೋಜನೆ ಬಗೆ ಕೇಂದ್ರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇವೆ; ಭಾನುವಾರದ ಸಭೆಯಲ್ಲಿ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದ್ದು, ಆ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಚಂಡಿಗಡದಲ್ಲಿ ಬುಧವಾರ ನಡೆದ ಕೇಂದ್ರ ಸರ್ಕಾರ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಕೇಂದ್ರ ಸಚಿವ ಪಿಯುಷ್ ಗೂಯಲ್, ಕೃಷಿ ಸಚಿವ ಅರ್ಜುನ್ ಮುಂಡ, ರಾಜ್ಯ ಗೃಹ ಸಚಿವ ನಿತ್ಯಾನಂದರಾಯ್, ಪಂಜಾಬ್ ಮುಖ್ಯಮಂತ್ರಿ ಭಗವಾಂತ ಮಾನ್ ಅವರು ಪಂಜಾಬ್ ಹರಿಯಾಣ ಹಾಗೂ ದೇಶಾದ್ಯಂತ ನಡೆಯುತ್ತಿರುವ ರೈತ ಹೋರಾಟದ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತೊಂದು ಸುತ್ತಿನ ಭಾನುವಾರ ಸಭೆಯಲ್ಲಿ ಅಧಿಕೃತವಾಗಿ ಸ್ಪಷ್ಟ ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯರೂ ಆದ ಕುರುಬೂರು ಶಾಂತಕುಮಾರ್ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ,ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ವೆಚ್ಚಕ್ಕೆ ಲಾಭಾಂಶ ಸೇರಿಸಿ ನಿಗದಿ ಮಾಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು ಎಂದರು.
60ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಬೆಳೆ ವಿಮಾ ಪದ್ಧತಿ ಬದಲಾಗಿ ಪ್ರತಿ ರೈತನ ಹೊಲದ ಬೆಳೆ ವಿಮೆ ನೀತಿ ಜಾರಿಯಾಗಬೇಕು, ಕೃಷಿ ಭೂಮಿ ಭೂಸ್ವಾದಿನ ಪ್ರಕ್ರಿಯೆ ನಿಲ್ಲಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ),ಸಂಘಟನೆಯ ದೆಹಲಿ ಫಂಜಾಬ ಹರಿಯಾಣ ಸುತ್ತ ಮುತ್ತಲ ಹೋರಾಟದ ಪ್ರಬಲತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದಿರುವ ಕುರುಬೂರು ಶಾಂತಕುಮಾರ್, ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಸಂದೇಶ ರವಾನೆಯಾಗದಂತೆ ತಡೆಯಲು ಇಂಟರ್ನೆಟ್ ,ಟ್ವಿಟ್ಟರ್, ಫೇಸ್ಬುಕ್, ಸೌಲಭ್ಯ ಬಂದ್ ಮಾಡಿರುವುದನ್ನು ಮರುಸಂಪರ್ಕ ಕಲ್ಪಿಸಲು ಒಪ್ಪಿದೆ ರೈತಮುಖಂಡರು ಸರ್ಕಾರದ ಅಂತಿಮ ಘೋಷಣೆ ತನಕ ಶಾಂತಿಯುತ ಪ್ರತಿಭಟನೆ ನಡೆಸಲು ಒಪ್ಪಿದ್ದಾರೆ ಎಂದರು.
ಹೋರಾಟದಲ್ಲಿ ಬಾಗಿಗಳಾಗಿರುವ ವಿವಿಧ ರೈತ ಸಂಘಟನೆಗಳ 14 ರೈತ ಮುಖಂಡರು, ಮಧ್ಯರಾತ್ರಿ ಒಂದು ಗಂಟೆ ತನಕ ಸರ್ಕಾರ ಜೊತೆ ಮಾತುಕತೆಯಲ್ಲಿ ಭಾಗವಹಿಸಿದರು. ರಾಷ್ಟ್ರೀಯ ರೈತ ಮುಖಂಡ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಜಗಜಿತ್ ಸಿಂಗ್ ಧಲೆವಾಲ, ಶಿವಕುಮಾರ್, ಕುರುಬೂರ್ ಶಾಂತಕುಮಾರ್, ಶರವಣ ಸಿಂಗ್ ಪಾಂದಾರ್, ಅಶೋಕ್ ಬೋಲಾರಿಯ, ಲಕ್ವಿನ್ಧರ್ ಸಿಂಗ್, ಬಲವಂತ್ ಸಿಂಗ್, ಜರ್ನಲ್ ಸಿಂಗ್, ಮುಂತಾದವರಿದ್ದರು.

























































