ಹೈದರಾಬಾದ್: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಡೆಯುತ್ತಿರುವ ಅನ್ನದಾತರ ಹೋರಾಟಕ್ಕೆ ಹೊಸ ಆಯಾಮ ಸಿಕ್ಕಿದೆ. ಜುಲೈ 8 ರಂದು ಸಂಸತ್ ಸದಸ್ಯರಿಗೆ ಜ್ಞಾಪನ ಪತ್ರ ಸಲ್ಲಿಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಬೇಡ ಮೋರ್ಚಾ (ರಾಜಕೀಯತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ, ದೇಶದ ರೈತರ ಬೆಂಬಲ ನಮಗಿದೆ ನಾವು ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಛಲ ನಮ್ಮಲ್ಲಿದೆ, ದಕ್ಷಿಣ ಭಾರತ ರಾಜ್ಯಗಳ ರೈತರು ಬೆಂಬಲಿಸಿ ಚಳುವಳಿಯನ್ನು ಪ್ರಬಲಗೊಳಿಸಿ, ರೈತಶಕ್ತಿಯನ್ನು ಹೆಚ್ಚಿಸಿ ಎಂದರು. ಎಂಎಸ್‌ಪಿ ಖಾತರಿ ಕಾನೂನಿಗೆ ಫೆಬ್ರವರಿ 13 ರಿಂದ 4 ಸ್ಥಳಗಳಲ್ಲಿ ನಮ್ಮ ಪ್ರತಿಭಟನೆ ನಡೆಯುತ್ತಿದ್ದು, 125 ದಿನಗಳಿಗೂ ಹೆಚ್ಚು ಕಾಲ ಸಾವಿರಾರು ರೈತರು ರಸ್ತೆಗಿಳಿದಿದ್ದಾರೆ, ಕೇಂದ್ರ ಸರ್ಕಾರ ಈಡೇರಿಸುವವರೆಗೆ ಈ ಪ್ರತಿಭಟನೆ ಮುಂದುವರಿಯುತ್ತದೆ ಎಂದು ತಿಳಿಸಿದರು.
ನಮ್ಮ ಭಾಗದ ರೈತ ಸಮುದಾಯದ ಆಕ್ರೋಶದಿಂದ ಗ್ರಾಮೀಣ ಪ್ರದೇಶದಲ್ಲಿ 2019 ರ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ 71 ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಅವರು ಒತ್ತಿ ಹೇಳಿದರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತಮ್ಮ ರೈತ ವಿರೋಧಿ ನೀತಿಯನ್ನು ಬದಲಾಯಿಸದಿದ್ದರೆ ಬಿಜೆಪಿ ರೈತರ ಬಾರಿ ಆಕ್ರೋಶ ಎದುರಿಸಲಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಮುಂಬರುವ ಎಲ್ಲಾ ವಿಧಾನಸಭಾ ಚುನಾವಣಾ ರಾಜ್ಯಗಳಲ್ಲಿ ರೈತರ ಕೋಪ. ತೋರಿಸಲಾಗುವುದು ಜುಲೈ 8 ರಂದು ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ವತಿಯಿಂದ ಬಿಜೆಪಿಯ 240 ಸಂಸದರನ್ನು ಹೊರತುಪಡಿಸಿ ಎಲ್ಲಾ ಸಂಸತ್ ಸದಸ್ಯರಿಗೆ ತಮ್ಮ 12 ಬೇಡಿಕೆಗಳ ಕುರಿತು ಜ್ಞಾಪಕ ಪತ್ರವನ್ನು ನೀಡಲಿದೆ ಎಂದರು . ಜುಲೈ ತಿಂಗಳಲ್ಲಿ ಎರಡು ವೇದಿಕೆಗಳಲ್ಲಿ ದೆಹಲಿಯಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಲಿವೆ ಎಂದು ತಿಳಿಸಿದರು.
ರೈತರ ಪ್ರತಿಭಟನೆಯನ್ನು ಬಲಪಡಿಸಲು ದಕ್ಷಿಣ ಭಾರತದ ರೈತರು ಜೂನ್ 24 ರಂದು ಕರ್ನಾಟಕದ ಶಿವಮೊಗ್ಗದಲ್ಲಿ ಬೃಹತ್ ರೈತ ಸಮಾವೇಶವನ್ನು ನಡೆಸಿ ತೀರ್ಮಾನಿಸಲಾಗಿದೆ ಎಂದ ಅವರು, ಎಸ್‌ಕೆಎಂ (ರಾಜಕೀಯೇತರ) ಸೆಪ್ಟೆಂಬರ್‌ನಲ್ಲಿ ಹರಿಯಾಣದಲ್ಲಿ ರೈತ ರ್ಯಾಲಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ಎಲ್ಲಾ ರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ. ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ ತಕ್ಷಣ ರೈತರಿಗೆ ಲಾಭವಿಲ್ಲ ರೈತರ ಕಣ್ಣಿಗೆ ಮಣ್ಣಿರಚಬಾರದು .ರೈತರು ಕೇಳುತ್ತಿರುವುದು ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಅದಕ್ಕಾಗಿಯೇ ನಮ್ಮ ಹೋರಾಟ. ಒಡಿಸ್ಸಾ ಮತ್ತು ಛತ್ತೀಸ್ಗಡ ರಾಜ್ಯಗಳು ಭತ್ತಕ್ಕೆ 3100 ಪ್ರೋತ್ಸಾಹ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ 2300. ಬೆಂಬಲ ಬೆಲೆ ನಿಗದಿ ಮಾಡಿರುವುದು ಯಾವ ನ್ಯಾಯ. ಆದರೆ ತೆಲಂಗಾಣ ಸರ್ಕಾರ ರೈತರ 2 ಲಕ್ಷ ಸಾಲ ಮನ್ನಾ ಮಾಡಿದೆ.ಪ್ರತಿ ಎಕರೆಗೆ ವರ್ಷಕ್ಕೆ 15 ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಇದು ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯ ಕ್ರಮವಾಗಿದೆ. ಆದರೆ ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಬಂಡವಾಳಶಾಹಿಗಳಿಗೆ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಇದು ರೈತರಿಗೆ ಬಗೆದ ದ್ರೋಹವಾಗಿದೆ.ಎಂದರು.
ಹರಿಯಾಣ ರಾಜ್ಯದ ರೈತ ಮುಖಂಡರಾದ ಅಭಿಮನ್ಯುಕೊಹರ್, ಲಕ್ವಿಂದರ್ ಸಿಂಗ್, ತಮಿಳುನಾಡಿನ ರೈತ ಮುಖಂಡ ಪಿಆರ್ ಪಾಂಡ್ಯನ್, ನವದೆಹಲಿಯ ಜಾಫರ್ ಖಾನ್. ಸುಖಜಿತ್ ಸಿಂಗ್., ಕರ್ನಾಟಕ ರಾಜ್ಯ ರೈತ ಸಂಘದ ಗೋವಿಂದ ರೆಡ್ಡಿ ಸಹಿತ ವಿವಿಧ ರಾಜ್ಯಗಳ ರೈತ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.