ಉಡುಪಿ: ಸಾವಯವ ಕೃಷಿಕ ಎಂದೇ ಜನಪ್ರಿಯರಾಗಿರುವ ಕರಾವಳಿಯ ಪ್ರಗತಿಪರ ರೈತ, ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ ಸಾವಿಗೆ ಶರಣಾಗಿದ್ದಾರೆ.
63 ವರ್ಷ ವಯಸ್ಸಿನ ಅವರು ಬುಧವಾರ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅವರ ಮೃತದೇಹ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿತ್ತು.
ಈ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ.
























































