ಬೆಂಗಳೂರು: ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವವು ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದೆಯೇ?
ಬಿಜೆಪಿ ಶಾಸಕರೇ ಅದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಸಂಬಂಧ ಬಿಎಸ್‌ವೈ ಕುಟುಂಬದ ವಿರುದ್ದ ಆರೋಪ ಮಾಡುತ್ತಿರುವಂತೆಯೇ ಪ್ರತಿಪಕ್ಷ ಕಾಂಗ್ರೆಸ್ ಕೂಡಾ ಕೇಸರಿ ಪಾಳಯವನ್ನು ಕುಟುಂಬ ರಾಜಕಾರಣದ ಉದಾಹರಣೆಯೊಂದಿಗೆ ತರಾಟೆಗೆ ತೆಗೆದುಕೊಂಡಿದೆ.
ಈ ಬಾರಿ ಉಪಚುನಾವಣೆಯಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರಗೆ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆ ಮಾಧ್ಯಮಗಳು ಸುದ್ದಿಯನ್ನು ಕೇಂದ್ರೀಕರಿಸಿದ್ದು, ಅದನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ ಟೀಕಾಪ್ರಹಾರ ಮಾಡಿದೆ.
ನಮ್ಮಲ್ಲಿ ಕುಟುಂಬ ರಾಜಕಾರಣವಿಲ್ಲ ಎನ್ನುವ ಆತ್ಮವಂಚನೆಯ ಮಾತಾಡುವ ಬಿಜೆಪಿ. “ನಾನೊಬ್ಬನೇ, ನನಗಿಬ್ಬರು” ಎನ್ನುವ ಬಿಎಸ್‌ವೈ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ BJP ಮೊದಲು ತಮ್ಮವರ DNA ಪರೀಕ್ಷೆ ಮಾಡಿಸಲಿ! DNA ಹೊಂದದಿದ್ದರೆ ತಮ್ಮದು ಕುಟುಂಬ ರಾಜಕಾರಣದ ಪಕ್ಷವಲ್ಲ ಎಂದು ಘೋಷಿಸಿಕೊಳ್ಳಲಿ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
https://twitter.com/INCKarnataka/status/1374236424589864960?s=1002
ಆದರೆ ಕಾಂಗ್ರೆಸ್ ಪಕ್ಷದ ಈ ಟ್ವೀಟ್, ‘ಲಾಟಿ ಕೊಟ್ಟು ಏಟು ತಿಂದ’ ಎಂಬ ಗಾದೆಗೆ ಸಾಕ್ಷಿಯಾದಂತಿದೆ. ಈ ಟ್ವೀಟ್‌ನಲ್ಲಿ ಕಾಂಗ್ರೆಸ್ ಪಕ್ಷವು ಬಿಎಸ್‌ವೈ ಕುಟುಂಬದತ್ತ ಬೊಟ್ಟು ಮಾಡಿದರೆ, ನೆಟ್ಟಿಗರು ಕೈ ನಾಯಕರ ಕುಟುಂಬ ರಾಜಕಾರಣದ ಪುರಾಣವನ್ನೇ ಅನಾವರಣ ಮಾಡಿದ್ದಾರೆ. ಕೋಲಾರದ ಸಂಸದರಾಗಿದ್ದವರ ಪುತ್ರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲವೇ? ಜಯನಗರದಲ್ಲಿ ಶಾಸಕಿಯಾಗಿರುವವರು ಕೈ ನಾಯಕರ ಮಗಳಲ್ಲವೇ? ಎಂದು ಪ್ರಶ್ನಿಸಿರುವ ನೆಟ್ಟಿಗರು, ಕಲಬುರಗಿ, ಧಾರವಾಡದಲ್ಲಿ ಶಾಸಕರ ಪತ್ನಿಯರಿಗೆ ಟಿಕೆಟ್ ನೀಡಿದ್ದಾರೆ ಎಂಬ ಕಮೆಂಟ್ ಗಮನಸೆಳೆದಿದೆ.
https://twitter.com/MrRareEarth/status/1374239435127066627
ಇಷ್ಟೇ ಅಲ್ಲ, ವರುಣಾದಲ್ಲಿ ಸಿದ್ದರಾಮಯ್ಯರ ಪುತ್ರ ಶಾಸಕರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಶಾಸಕರ ಸಹೋದರನಿಗೆ ಟಿಕೆಟ್ ಕೊಡಲಾಗಿದೆ. ಚಿತ್ತಾಪುರ, ಯಮಕನಮರಡಿ, ಗಾಂಧಿನಗರದಲ್ಲಿ ಕಾಂಗ್ರೆಸ್ ನಾಯಕರ ಸಂಬಂಧಿಗಳೇ ಸ್ಪರ್ದಿಸಿರುವ ಬಗ್ಗೆ ಪ್ರತ್ಯುತ್ತರವನ್ನು ನೆಟ್ಟಿಗರು ನೀಡಿ ಕೈ ನಾಯಕರನ್ನೇ ಮುಜುಗರಕ್ಕೀಡುಮಾಡಿದ್ದಾರೆ.
https://twitter.com/MrRareEarth/status/1374240264898813958