ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ದೆಹಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೀಗ ಕೇಂದ್ರೀಯ ತನಿಖಾ ದಳ (ಸಿಬಿಐ) ಹಿಡಿತದಲ್ಲಿ ಸಿಲುಕಿದ್ದಾರೆ.. ದೆಹಲಿಯ ತಿಹಾರ್ ಜೈಲಿನಿಂದಲೇ ಸಿಬಿಐ ಅಧಿಕಾರಿಗಳು ಕೇಜ್ರಿವಾಲ್ ಬಂಧನ ಪ್ರಕ್ರಿಯೆ ನಡೆಸಿದರು ಎನ್ನಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ್ದ ಆಪ್ ವರಿಷ್ಠ ನಾಯಕ ಅರವಿಂದ್ ಕೇಜ್ರಿವಾಲ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತಾದರೂ ಆ ಆದೇಶವನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿತ್ತು. ವಿಚಾರಣೆ ನಡೆಸಿ ಬುಧವಾರ ಆದೇಶ ಪ್ರಕಟಿಸುವ ನಿರೀಕ್ಷೆಯಿತ್ತು. ಅದಾಗಲೇ ಸಿಬಿಐ ಮಂಗಳವಾರ ತಿಹಾರ್ ಜೈಲಿಗೆ ಧಾವಿಸಿರುವ ಸಿಬಿಐ ಅಧಿಕಾರಿಗಳ ತಂಡ ಸುದೀರ್ಘ ವಿಚಾಣೆಗೆ ಗುರಿಪಡಿಸಿ ಬಂಧನ ಪ್ರಕ್ರಿಯೆ ನಡೆಸಿದೆ ಎನ್ನಲಾಗಿದೆ.