ಮಂಗಳೂರು: ಚಂದ್ರದರ್ಶನ ವಿಳಂಬ ಹಿನ್ನೆಲೆ ನಾಳೆ ರಮಳಾನ್ 30 ದಿನವೆಂದು ಪರಿಗಣಿಸಲಾಗಿದ್ದು ಮುಸ್ಲಿಮರ ಪವಿತ್ರ ಹಬ್ಬ ಶವ್ವಾಲ್ 01 (ಈದುಲ್ ಫಿತ್ರ್) ಶನಿವಾರ ಆಚರಿಸಲಾಗುತ್ತದೆ.
ಈ ಕುರಿತಂತೆ ಸಮುದಾಯಕ್ಕೆ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಗಳ ಪ್ರಮುಖರು ಸಂದೇಶ ರವಾನಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ನಿರ್ಧಾರ..
ಗುರುವಾರ ಶವ್ವಾಲ್ ತಿಂಗಳ (ಈದುಲ್ ಫಿತ್ರ್) ಚಂದ್ರದರ್ಶನವಾಗಿಲ್ಲ. ಹಾಗಾಗಿ ಶುಕ್ರವಾರದಂದು ರಮಳಾನ್ 30 ಪೂರ್ತೀಕರಿಸಿ ಏ.22, ಶನಿವಾರದಂದು ಶವ್ವಾಲ್ 01 (ಈದುಲ್ ಫಿತ್ರ್) ಆಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ತೀರ್ಮಾನಿಸಿದ್ದಾರೆ ಎಂದು ಧಾರ್ಮಿಕ ಮುಖಂಡರು ತಿಳಿಸಿದ್ದಾರೆ.

























































ದಕ್ಷಿಣ ಕನ್ನಡ ಜಿಲ್ಲಾ ಖಾಝಿ ನಿರ್ಧಾರ..