ಮಂಗಳೂರು: ರಮ್ಜಾನ್ ಮಾಸಾಚರಣೆಯ ಕೈಂಕರ್ಯದಲ್ಲಿ ತಲ್ಲೀನರಾಗಿರುವ ಕರಾವಳಿ ಜಿಲ್ಲೆಗಳ ಮುಸ್ಲಿಮರು ಇದೀಗ ಈದುಲ್ ಫಿತ್ರ್ ತಯಾರಿಯಲ್ಲಿದ್ದಾರೆ. ಈದುಲ್ ಫಿತ್ರ್ (ಶವ್ವಾಲ್ 01) ಬುಧವಾರ ಆಚರಿಸಲು ಧರ್ಮಗುರುಗಳು ಮಾರ್ಗದರ್ಶನ ಮಾಡಿದ್ದಾರೆ.
09-04-2024 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಶವ್ವಾಲ್ ತಿಂಗಳ (ಈದುಲ್ ಫಿತ್ರ್) ಪ್ರಥಮ ಚಂದ್ರ ದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ಪ್ರಕಟಿಸಿದ್ದಾರೆ.
ಈ ಕುರಿತಂತೆ ಧಾರ್ಮಿಕ ಮುಖಂಡರು ಮಾಹಿತಿ ಹಂಚಿಕೊಂಡಿದ್ದಾರೆ. ದಿನಾಂಕ 10-04-2024 ಬುಧವಾರ ‘ಶವ್ವಾಲ್ 1(ಈದುಲ್ ಫಿತ್ರ್)’ ಆಚರಿಸಲಾಗುತ್ತದೆ ಎಂದು ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ & ಈದ್ಗಾ ಮಸೀದಿ ಕೋಶಾಧಿಕಾರಿ ಹಾಜಿ ಎಸ್ ಎಂ ರಶೀದ್ ತಿಳಿಸಿದ್ದಾರೆ. .

























































