ದೆಹಲಿ: ದೇಶದಲ್ಲಿ ಪಾಸ್‌ಪೋರ್ಟ್ ಇನ್ನು ಮುಂದೆ ಡಿಜಿಟಲ್ ರೂಪದಲ್ಲಿ ಬರಲಿದೆ. ಇ-ಪಾಸ್‌ಪೋರ್ಟ್ ರೂಪದಲ್ಲಿ ಜಾರಿಗೆ ಬರಲಿದ್ದು ಈ ಡಿಜಿಟಲೀಕರಣ ವ್ಯವಸ್ಥೆ ಪರಿಪೂರ್ಣ ಜಾರಿ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿದೆ.
ಸಂಸತ್ತಿನಲ್ಲಿಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 39.5 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಇ-ಪಾಸ್‌ಪೋರ್ಟ್ ಬಗ್ಗೆ ಘೋಷಣೆ ಮಾಡಿದರು.
ಹೇಗಿರುತ್ತದೆ ಇ-ಪಾಸ್‌ಪೋರ್ಟ್..?
ಜನರ ಅನುಕೂಲಕ್ಕಾಗಿ ಇ- ಪಾಸ್‌ಪೋರ್ಟ್‌ಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ. ಪಾಸ್‌ಪೋರ್ಟ್ ಜಾಕೆಟ್‌ನಲ್ಲಿ ಮಾಹಿತಿಗಳನ್ನು ಎನ್‌ಕೋಡ್ ಮಾಡಲಾಗುತ್ತದೆ. ಅದಕ್ಕಾಗಿ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗುತ್ತದೆ. .
ವಿದೇಶಾಂಗ ವ್ಯವಹಾರಗಳ ಸಚಿವಾಲಯ ರೂಪಿಸುವ ಭದ್ರತಾ ವೈಶಿಷ್ಟ್ಯಗಳೊಂದಿಗೆ ಚಿಪ್ ಹೊಂದಿರುವ ಇ-ಪಾಸ್‌ಪೋರ್ಟನ್ನು ನೀಡಲಾಗುತ್ತದೆ. ವಾರಸುದಾರರ ವೈಯಕ್ತಿಕ ಮಾಹಿತಿ ಡಿಜಿಟಲ್ ಸಹಿಯೊಂದಿಗೆ ಈ ಚಿಪ್ ಅಳವಡಿಸಲಾಗುತ್ತದೆ. ಒಂದು ವೇಳೆ ಚಿಪ್ ಹಾಳಾದರೂ ಕಂಪ್ಯೂಟರ್ ಮೂಲಕ ಮಾಹಿತಿ ತಿಳಿಯಲು ಸಾಧ್ಯವಾಗುತ್ತದೆ.