ಬೆಂಗಳೂರು: ರಾಜ್ಯದ ಸಾರಿಗೆ ಕ್ಷೇತ್ರದಲ್ಲಿನ ಅಭಿವೃದ್ಧಿಯ ಶಕೆ ಇಡೀ ದೇಶದ ಗಮನಸೆಳೆದಿದೆ. ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಪ್ರಗತಿಯ ಮೂಲಕ ರಾಷ್ಟ್ರದ ಗಮನಕೇಂದ್ರೀಕರಿಸಿರುವ ಸಾರಿಗೆ ಇಲಾಖೆ ಇದೀಗ ಆರ್.ಟಿ.ಓ. ಕಚೇರಿ ವ್ಯಾಪ್ತಿಯಲ್ಲಿನ ಸುಧಾರಣಾ ಕ್ರಮದ ಮೂಲಕವೂ ಸಾರ್ವಜನಿಕರ ಕುರ್ತೂಹಲದ ಕೇಂದ್ರಬಿಂದುವಾಗಿದೆ.
ಇದೀಗ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ಅನುಷ್ಠಾನ ಮೂಲಕ ಹೊಸ ಆಯಾಮಕ್ಕೆ ಮುನ್ನುಡಿ ಬರೆಯಲಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ನಿರ್ದೇಶನದಂತೆ ಈ ಕ್ರಮ ಕ್ಷಿಪ್ರಗತಿಯಲ್ಲಿ ಸಾಗಿದೆ.
ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ಅನುಷ್ಠಾನವು ಇಲಾಖೆಯ ಚಾಲನಾ ಪರೀಕ್ಷೆಯಲ್ಲಿ ಪ್ರಭಾವಿಗಳ ಹಸ್ತಕ್ಷೇಪವನ್ನು ಕೊನೆಗಾಣಿಸಲು, ಪಾರದರ್ಶಕತೆಯನ್ನು ತರಲು ಹಾಗೂ ವೈಜ್ಞಾನಿಕವಾಗಿ ಗುಣಮಟ್ಟದ ಪರೀಕ್ಷೆ ನಡೆಸಲು ಸಹಕಾರಿಯಾಗಲಿದೆ. ಇದರಿಂದ ಪರಿಣತಿ ಹೊಂದಿದ ಚಾಲಕರು ಲಭ್ಯವಾಗುವುದರಿಂದ ಅಪಘಾತಗಳ ತಡೆಗಟ್ಟಲು ಕೂಡ ಸಾಧ್ಯವಾಗುತ್ತದೆ.
ಈ ಹಿಂದೆ ಮೋಟಾರು ವಾಹನ ನಿರೀಕ್ಷಕರು ಚಾಲನಾ ಪರೀಕ್ಷೆಗಳನ್ನು ನಡೆಸುವಾಗ, ಸಾಕಷ್ಟು ದೂರುಗಳು ಸಲ್ಲಿಕೆಯಾಗುತ್ತಿದ್ದವು. ಇದರಿಂದ ಮಾನವ ಹಸ್ತಕ್ಷೇಪವನ್ನು ತಡೆಯಲು ಹಾಗೂ ಯಾವುದೇ ಅವ್ಯವಹಾರಗಳಿಗೆ ಎಡೆಮಾಡಿಕೊಡಬಾರದೆಂಬ ಉದ್ದೇಶದಿಂದ ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುತ್ತಿದೆ. ಚಾಲಕ ಪರವಾನಗಿ ಪಡೆಯುವ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿಸುವ ಕಾರ್ಯ ಇದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಸ್ವಯಂಚಾಲಿತ ಚಾಲನಾ ಪರೀಕ್ಷಾಪಥ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳ ವಿವರ:
ಜ್ಞಾನಭಾರತಿ – 170.00ಲಕ್ಷ
ಎಲೆಕ್ಟ್ರಾನಿಕ್ ಸಿಟಿ – 515.00ಲಕ್ಷ
ಮೈಸೂರು -594.78ಲಕ್ಷ
ಕಲಬುರಗಿ -415.00 ಲಕ್ಷ
ಶಿವಮೊಗ – 466.00 ಲಕ್ಷ
ಧಾರವಾಡ – 575.00ಲಕ್ಷ
ಹಾಸನ – 400.00ಲಕ್ಷ
ಚಾಲನಾ ಪರೀಕ್ಷಾ ಪಥದ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಸೆನ್ಸಾರ್ ಅಳವಡಿಕೆ ಪ್ರಗತಿಯಲ್ಲಿರುವ ವಿವರ:
ಮಂಗಳೂರು -779.00 ಲಕ್ಷ
ಬೆಳಗಾವಿ – 805.00 ಲಕ್ಷ
ರಾಯಚೂರು-800.00 ಲಕ್ಷ
ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿರುವ ಚಾಲನಾ ಪರೀಕ್ಷಾ ಪಥಗಳು:
ತುಮಕೂರು -900.00 ಲಕ್ಷ
ಸಕಲೇಶಪುರ -675.00 ಲಕ್ಷ
.ಚಿಂತಾಮಣಿ -500.00 ಲಕ್ಷ
ಸಾಗರ -675.00 ಲಕ್ಷ
ರಾಣೇಬೆನ್ನೂರು -475.00 ಲಕ್ಷ
ಶಿರಸಿ -760.00 ಲಕ್ಷ
ಯಲಹಂಕ -400.00 ಲಕ್ಷ
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾರ್ಯದೇಶ ನೀಡಿರುವ ಪಥಗಳು:
ಕೆ.ಜಿ.ಎಫ್ -500.00 ಲಕ್ಷ
ಸಾಗರ -675.00 ಲಕ್ಷ
ಭಾಲ್ಕಿ -500.00 ಲಕ್ಷ
ಗೋಕಾಕ್ -700.00 ಲಕ್ಷ
ದಾಂಡೇಲಿ -660.00 ಲಕ್ಷ
ಬೈಲಹೊಂಗಲ -550.00 ಲಕ್ಷ
ಚಾಲನಾ ಪರೀಕ್ಷಾ ಪಥ 2024-25ನೇ ಸಾಲಿನಲ್ಲಿ ಪ್ರಸ್ತಾಪಿಸಲಾಗಿರುವ ವಿವರ:
ಉಡುಪಿ
ಚಿಕ್ಕಬಳ್ಳಾಪುರ
ನೆಲಮಂಗಲ
ಮಧುಗಿರಿ
ಹುಣಸೂರು
ಮಡಿಕೇರಿ
ಚಾಲನಾ ಪರೀಕ್ಷಾ ಪಥದ ಕಾಮಗಾರಿ ಪ್ರಗತಿಯಲ್ಲಿರುವ ವಿವರ:
ದೇವನಹಳ್ಳಿ -800.00 ಲಕ್ಷ
ಕೋಲಾರ -900.00 ಲಕ್ಷ
ಹೊಸಪೇಟೆ -900.00 ಲಕ್ಷ
ಗದಗ -900.00 ಲಕ್ಷ
ಬಳ್ಳಾರಿ -900.00 ಲಕ್ಷ
ವಿಜಯಪುರ -900.00 ಲಕ್ಷ
ಬೀದರ್ -900.00 ಲಕ್ಷ
ಯಾದಗಿರಿ -900.00 ಲಕ್ಷ
ದಾವಣಗೆರೆ -900.00 ಲಕ್ಷ
ಚಾಲನಾ ಪರೀಕ್ಷಾ ಪಥದ ಸಿವಿಲ್ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಸೆನ್ಸಾರ್ ಅಳವಡಿಕೆಗೆಗಾಗಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿರುವ ವಿವರ:
ಅಥಣಿ -750.00 ಲಕ್ಷ
ಚಿಕ್ಕೋಡಿ-900.00 ಲಕ್ಷ
ಹಾವೇರಿ-835.00 ಲಕ್ಷ
ಬಾಗಲಕೋಟೆ-900.00 ಲಕ್ಷ
ಜಮಖಂಡಿ-750.00 ಲಕ್ಷ
ಸಾರಿಗೆ ಇಲಾಖೆ ( RTO) ದಲ್ಲಿ ಚಾಲನಾ ಪರೀಕ್ಷಾ ಪಥಗಳ ಕಾಮಗಾರಿ, ಅನುಷ್ಠಾನದಲ್ಲಿ ದಾಖಲೆ ಪ್ರಮಾಣದ ಪಗ್ರತಿ ಕಂಡಿದೆ. ಸರ್ಕಾರಿ ಕಾಮಗಾರಿಗಳು, ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಳ್ಳಲು ವರ್ಷಾನುಗಟ್ಟಲೆ ಬೇಕಾಗುತ್ತದೆ ಎಂಬ ಅಪವಾದಕ್ಕೆ ತದ್ವಿರುದ್ಧವಾಗಿ ಈ ಕೆಲಸ ಸಾಗಿದೆ. ಯಾವುದೇ ವಿಳಂಬಕ್ಕೆ ಅವಕಾಶ ಇರಬಾರದೆಂಬ ನಿಟ್ಟಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಖುದ್ದು ಪರಿಶೀಲನೆ ನಡೆಸುತ್ತಿರುವುದು ವಿಶೇಷ. ಈ ಉದ್ದೇಶಿತ ಯೋಜನೆ ಶೀಘ್ರದಲ್ಲೇ ಪರಿಪೂರ್ಣವಾಗಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.