ಯಲಹಂಕ: ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು ದೊಡ್ಡಜಾಲ ಗ್ರಾಮ ಪಂಚಾಯತಿಗೆ ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವ ಕಮಿಪಲ್ ಮೋರೇಶ್ವರ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಆಶ್ವರ್ಯ ವ್ಯಕ್ತ ಪಡಿಸಿದರು.
ಪಂಚಾಯತ್ ರಾಜ್ ಇಲಾಖೆ ಹಿರಿಯ ಅಧಿಕಾರಿಗಳ ತಂಡ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಶಾಲೆ, ಸುಲಭ ಶೌಚಾಯಲ, ಡಿಜಿಟಲ್ ಲೈಬ್ರೆರಿ, ಒಳಾಂಗಣ ಕ್ರೀಡಾಂಗಣ, ಈಜುಕೊಳ, ಸೇರಿದಂತೆ ಹತ್ತು ಹಲವು ಕಾಮಗಾರಿಗಳು ಮತ್ತು ಅಭಿವೃದ್ದಿ ಕೆಲಸಗಳನ್ನ ಸಚಿವ ಕಮಿಪಲ್ ಮೋರೇಶ್ವರ್ ಪಾಟೀಲ್ ವೀಕ್ಷಣೆ ಮಾಡಿ ಪ್ರಶಂಸೆ ವ್ಯಕ್ತ ಪಡಿಸುವ ಜೊತೆಗೆ ಆಶ್ಚರ್ಯ ವ್ಯಕ್ತ ಪಡಿಸಿದರು.
ಗಾಂದೀಜಿಯವರ ಕನಸ್ಸು ನಿಜವಾಗಲೂ ಇಲ್ಲಿ ಸಾಕಾರ ಆಗಿದೆ ಮತ್ತು ಪ್ರಧಾನಿ ಮೋದಿಯವರ ಕನಸ್ಸಿನ ಗ್ರಾಮ ಪಂಚಾಯತಿ ಇದಾಗಿದ್ದು ಪ್ರತಿ ಹಳ್ಳಿಗು ಕುಡಿಯುವ ನೀರು, ಶೌಚಾಲಯ, ಉತ್ತಮ ಗುಣಮಟ್ಟದ ಶಾಲೆ, ಕಾಂಕ್ರೀಟ್ ರಸ್ತೆಗಳು, ಬೀದಿ ದೀಪಕ್ಕೆ ಸೋಲಾರ್ ಅಳವಡಿಕೆಯಿಂದ ಸುಮಾರು ಪ್ರತಿ ತಿಂಗಳಿಗೆ 10-12 ಲಕ್ಷ ಹಣ ಉಳಿತಾಯ, ಅದರೊಂದಿಗೆ ನನ್ನ ಗಮನ ಸೆಳೆದದ್ದು ಪ್ರತಿ ಹಳ್ಳಿಗೂ ಸಿಸಿ ಟಿವಿ ಅಳವಡಿಕೆ, ವೈ-ಫೈ ಸೇವೆ ಮತ್ತು ದೇಶದಲ್ಲೆ ಮೊಟ್ಟ ಮೊದಲ ಗ್ರಾಮ ಪಂಚಾಯತಿ ವತಿಯಿಂದ 20-40% ರಿಯಾಯತಿಯ ಮೆಡಿಕಲ್ ಸ್ಟೋರ್ ನೋಡಿ ನನಗೆ ಆಶ್ಚರ್ಯ ಆಗ್ತಿದೆ, ಒಂದು ಗ್ರಾಮ ಪಂಚಾಯತಿಯನ್ನ ಹೇಗೆಲ್ಲಾ ಮಹಾನಗರ ಪಾಲಿಕೆಗೆ ಮೀರಿದ ಅಭಿವೃದ್ದಿ ಮಾಡಬಹುದು ಎಂಬುದನ್ನ ಮಹೇಶ್ ಎಂಬ ಯುವಕರ ತಂಡ ಮಾಡಿ ತೋರಿಸಿದೆ. ಇದು ದೇಶಕ್ಕೆ ಮಾದರಿ ಗ್ರಾಮ ಪಂಚಾಯತಿ ಎಂಬುದರಲ್ಲಿ ಆಶ್ಚರ್ಯವಿಲ್ಲ, ಇದನ್ನ ನಾನು ಪ್ರಧಾನಿ ಮೋದಿಯವರ ಬಳಿ ಪ್ರಸ್ತಾಪ ಮಾಡಿ ಇನ್ನೂ ಹೆಚ್ಚಿ ಅಭಿವೃದ್ದಿಗೆ ಮತ್ತು ಬೇರೆಯವರಿಗೆ ಪ್ರೇರೇಪಣೆಗೆ ಮಾದರಿ ಗ್ರಾಮ ಪಂಚಾಯತಿಯಾಗಿ ಇಡೀ ದೇಶಕ್ಕೆ ಪರಿಚಯಸುವ ಆಸೆ ವ್ಯಕ್ತ ಪಡಿಸಿದರು.
ಗ್ರಾಮ ಪಂಚಾಯತಿ ಸದಸ್ಯತವ ಈಗೆಲ್ಲಾ ದುಬಾರಿ ಆಗ್ತಾ ಇದೆ, ಗೆದ್ದವರು ಬರಿ ನಾಮಕಾವಸ್ತೆಗೆ ಕೆಲಸ ಮಾಡ್ತಾರೆ, ಗ್ರಾಮದ ಅಭಿವೃದ್ದಿಗಿಂತ ಗೆದ್ದ ಮೇಲೆ ತಮ್ಮ ಅಭಿವೃದ್ದಿ ಮಾತ್ರ ನೋಡ್ತಾರೆ, ಹೆಚ್ಚು ಗಮನ ಹರಿಸ್ತಾರೆ, ಆದರೆ ಈ ಗ್ರಾಮ ಪಂಚಾಯತಿಯ ಕೆಸಲವು ಅಭಿವೃದ್ದಿ ನೋಡಿ ಮುಂದೋಂದು ದಿನ ದೇಶವಲ್ಲ, ಇಡೀ ಪ್ರಪಂಚ ನೋಡುವ ಮಟ್ಟಕ್ಕೆ ಅಭಿವೃದ್ದಿ ಮಾಡಿ ತೋರಿಸ್ತಾರೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಚಿವರಿಗೆ ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರಾದ ಮಹೇಶ್ ಕುಮಾರ್ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಸಾಥ್ ನೀಡಿದರು.