ದೊಡ್ಡಬಳ್ಳಾಪುರ: ಪೆಟ್ರೋಲ್, ಡಿಸೇಲ್ ಹಾಗೂ ದಿನಪಯೋಗಿ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಗುರುವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಲಾಕ್ ಡೌನ್ ನಿಂದಾಗಿ ಮಧ್ಯಮ ವರ್ಗದವರ ಪಾಲಿಗೆ ಸಹಿಸಲಾರದ ಹೊಡೆತ ಬಿದ್ದಿದೆ. ಹಲವಾರು ಕೈಗಾರಿಕಾ ಪ್ರದೇಶದಲ್ಲಿ ಕಂಪನಿಗಳು ಬಾಗಿಲು ಮುಚ್ಚಿದ್ದು ಲಕ್ಷಾಂತರ ಕಾರ್ಮಿಕರು ನಿರೋದ್ಯೊಗಿಗಳಾಗಿದ್ದಾರೆ. ವ್ಯಾಪಾರ ವಹಿವಾಟು ನೆಲ ಕಚ್ಚಿವೆ. ಬೀದಿ ಬದಿ ವ್ಯಾಪಾರಿಗಳು ಹೋಟೆಲ್ ಉದ್ದಿಮೆ ದಾರರು,ದಿನಗೂಲಿ ಕಾರ್ಮಿಕರ ಪರಿಸ್ಥಿತಿ ದಿಕ್ಕು ತೊಚದಂತಾಗಿದೆ. ಸಮಾಜದಲ್ಲಿ ಮಧ್ಯಮ ವರ್ಗದ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟರೂ ಕೂಡ ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಳ್ಳದೆ ದಿನಂಪ್ರತಿ ಪೆಟ್ರೋಲ್, ಡೀಸೆಲ್ ಹಾಗು ಗ್ಯಾಸ್ ಬೆಲೆಯನ್ನು ಬೇಕಾಬಿಟ್ಟಿ ಏರಿಸುತ್ತಿರುವುದು ಮಧ್ಯಮ ವರ್ಗದ ಜನರಿಗೆ ಬದುಕು ನಡೆಸುವುದು ಕಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕರುನಾಡ ವಿಜಯಸೇನರ ವಕ್ತಾರ ರಾಮ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಮಿತಿ ಪದಾಧಿಕಾರಿ ನಂಜಪ್ಪ ಮಾತನಾಡಿ ಶೀಘ್ರವೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಜನರಿಗೆ ಹೊರೆಯಾಗುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕಿ ಸಾಮಾನ್ಯ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು. ಕನಿಷ್ಟ ದಿನಪಯೋಗಿ ವಸ್ತುಗಳ ಬಗ್ಗೆ ತೀವ್ರ ನಿಗಾವಹಿಸಿ ಬೆಲೆಗಳನ್ನು ಪರಿಷ್ಕರಿಸಿ ಬೆಲೆ ಇಳಿಕೆ ಮಾಡಬೇಕಿದೆ ಎಂದರು.
ಈ ವೇಳೆ ರೇಣುಕಾ ಪ್ರಸಾದ್, ತಾಲ್ಲೂಕು ಅಧ್ಯಕ್ಷ ಮಂಜುನಾಥ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ, ನಗರಾಧ್ಯಕ್ಷ ಫಣೀಶ್, ಶಿವಕುಮಾರ್, ಅನಿಲ್, ದಯಾನಂದ, ಬಾಬು, ರಮೇಶ್, ಗೌತಮ್ ಮಹಿಳಾ ಪದಾಧಿಕಾರಿಗಳಾ ಶಾಂತಮ್ಮ, ಗೀತಾ ಮತ್ತಿತ್ತರಿದ್ದರು.