ದೊಡ್ಡಬಳ್ಳಾಪುರ: ರಸ್ತೆ ಸುರಕ್ಷತ ಸಪ್ತಾಹದ ಅಂಗವಾಗಿ ಬೆಂಗಳೂರು ಹೊರವಲಯದಲ್ಲಿ ಟಾಟಾ ಬಿರ್ಲಾ ಹಾಗು ಲಾವಣ್ಯ ವಿದ್ಯಾಸಂಸ್ಥೆಯ ವಿಧ್ಯಾರ್ಥಿಗಳಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಯಿಂದ ಬಸವ ಭವನವರಗೆ ಜಾಥಾ ನಡೆಸಲಾಯಿತು. ವಿವಿಧ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಸವಾರರಿಗೆ ಸುಮಾರು 25 ಸಾವಿರ ಕರ ಪತ್ರಗಳನ್ನು ಹಂಚಿ ಜಾಗೃತಿಯನ್ನು ಮೂಡಿಸಿದರು. ವಾಹನ ಸವಾರರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂಬುದು ಇವರ ಉದ್ದೇಶವಾಗಿದೆ.
ಟಾಟಾ ಬಿರ್ಲಾ ಕಂಪನಿಯ ಮ್ಯಾನೇಜರ್ ಮಂಜುನಾಥ್ ಮಾತನಾಡಿ, ರಸ್ತೆಯಲ್ಲಿ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಅದಕ್ಕೆ ಬೇಕಾದಂತಹ ಸಲಕರಣೆಗಳನ್ನು ಉಪಯೋಗಿಸಿಕೊಂಡು ವಾಹನ ಚಾಲನೆ ಮಾಡಬೇಕು.ಅದರೆ ಇತ್ತೀಚಿನ ದಿನಗಳಲ್ಲಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು, ಬೈಕ್ ವೀಲಿಂಗ್ ಮಾಡುವುದು, ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು, ಸೀಟ್ ಬೆಲ್ಟ್ ಹಾಕದೆ ಕಾರುಗಳನ್ನು ಓಡಿಸುವುದು ಇತ್ಯಾದಿ ನಿಯಮ ಉಲ್ಲಂಘನೆಯಿಂದಾಗಿ ಅಪಘಾತಗಳಾಗಿ ಜನರು ಸಾವನ್ನಪ್ಪುತ್ತಿದ್ದಾರೆ. ಈ ಘಟನೆಗಳತ್ತ ಬೆಳಕು ಚೆಲ್ಲುವ ಸಂಗತಿಗಳನ್ನು ಸಾರ್ವಜನಿಕರಿಗೆ ಮನದಟ್ಟುಮಾಡುವ ಪ್ರಯತ್ನದಲ್ಲಿ ಈ ವಿದ್ಯಾರ್ಥಿ ಸಮೂಹ ಯಶಸ್ವಿಯಾಯಿತು. ಈ ಅರ್ಥಪೂರ್ಣ ಜಾಥಾಗೆ ಸಾರ್ವಜನಿಕರಿಂದಲೂ ಪ್ರೋತ್ಸಾಹ ಸಿಕ್ಕಿದೆ.