ಬೆಂಗಳೂರು: ಈ ವರೆಗೂ ಕಾಂಗ್ರೆಸ್ ಜೊತೆ ಸಾಂಗತ್ಯ ಹೊಂದಿದ್ದ ಜೆಡಿಎಸ್ ರಾಜ್ಯದ ಹಲವೆಡೆ ಇದೀಗ ಮೈತ್ರಿ ಮುರಿದುಕೊಂಡಿದೆ ಕಾಂಗ್ರೆಸ್ ಶಾಸಕರಿರುವ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮೈತ್ರಿ ತ್ಯಜಿಸಿರುವ ಜೆಡಿಎಸ್, ಅಲ್ಲಿನ ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ಜೊತೆ ಸೇರಿಕೊಂಡಿದೆ. ದೊಡ್ಡಬಳ್ಳಾಪುರ ತಾಲೂಕು ಭಕ್ತರಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಜೆಡಿಎಸ್ ಬೆಂಬಲಿಗ ಸದಸ್ಯರು ಜೊತೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಸಾಸಲು ಹೋಬಳಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದರೂ ಅಲ್ಲಿ ಅಧಿಕಾರ ಕೈ ಜಾರಿದೆ. ಬಿಜೆಪಿ-ಜೆಡಿಎಸ್ ಪಕ್ಷಗಳು ಅಧಿಕಾರ ಹಂಚಿಕೊಂಡಿವೆ. ಈ ಪಂಚಾಯತ್‌ನ ಅಧ್ಯಕ್ಷರಾಗಿ ಬಿಜೆಪಿಯ ಸಿದ್ಧಲಿಂಗಯ್ಯ ಚುನಾವಣೆ ಮೂಲಕ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ನ ಹೇಮಾಮಾಲಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೈತ್ರಿ ನೇತೃತ್ವ ವಹಿಸಿರುವ ಸಾರಥಿ ಚಿತ್ರ ನಿರ್ಮಾಪಕ,ಬಿಜೆಪಿ ಮುಖಂಡರಾದ ಸತ್ಯಪ್ರಕಾಶ್ ಮಾತನಾಡಿ ಅಭಿವೃದ್ಧಿ ದೃಷ್ಟಿಯಿಂದ ಎರಡೂ ಪಕ್ಷಗಳೂ ಮೈತ್ರಿ ಮಾಡಿಕೊಂಡಿದ್ದೀವಿ.ಅಧಿಕಾರದ ಆಸೆಯಿಂದಲ್ಲ ಎಂದಿದ್ದಾರೆ.
ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ.ಪಕ್ಷದ ಬೆಂಬಲ ಇರುತ್ತಷ್ಟೇ. ಮುಂಬರುವ ಎಲ್ಲಾ ರೀತಿಯ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಉದ್ದೇಶ ಇದೆ ಎಂದರು.
ಜೆಡಿಎಸ್ ಮುಖಂಡ ರಾಜಗೋಪಾಲ್ ಮಾತನಾಡಿ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರ ಸಹಮತದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.