ಇದು ದೇವರಿಗಾಗಿ ಹೊಡೆದಾಟ.. ದೇವರ ಮುಂದೆ ಭಕ್ತಿ ಮತ್ತು ಶಕ್ತಿಯ ಕಾಳಗ..
ಕರ್ನೂಲ್: ಜಾತ್ರೆ ಎಂದರೆ ದೇವರ ಪೂಜೆ, ಪುನಸ್ಕಾರ ಸಹಿತ ಕೈಂಕರ್ಯಗಳ ಸಡಗರ. ಆದರೆ ಆಂಧ್ರಪ್ರದೇಶದ ಕರ್ನೂಲಿನ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ದೇವರಿಗಾಗಿ ಹೊಡೆದಾಡುವುದೇ ಜಾತ್ರೆಯ ತಿರುಳು. ಇಲ್ಲಿ ಹೊಡೆದಾಟ ಬಡಿದಾಟ ಹೇಗಿರುತ್ತೆ ಅಂದರೆ ಸುತ್ತಮುತ್ತಲ ಹತ್ತೂರಿನ ಗ್ರಾಮಸ್ಥರು ಭಕ್ತರಾಗಿ ಬಂದು ಬಡಿಗೆಗಳಿಂದ ಪರಸ್ಪರ ಬಡಿದಾಡ್ತಾರೆ
ನವರಾತ್ರಿ ಸಂದರ್ಭದಲ್ಲಿ ಕರ್ನೂಲಿನ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ಈ ಬಡಿಗೆಯ ಜಾತ್ರೆ ನಡೆಯುತ್ತದೆ. ಪ್ರತೀ ವರ್ಷದಂತೆ ಈ ಬಾರಿಯೂ ಈ ಜಾತ್ರೆ ಗಮನಸೆಳೆಯಿತು.
👆 ದೇವರಿಗಾಗಿ ನಡೆದ ಹೊಡೆದಾಟದ ದೃಶ್ಯ
ನವರಾತ್ರಿಯ ಪೂಜೆಯ ನಂತರ ಮಧ್ಯರಾತ್ರಿ ಸರಿಯುತ್ತಿದ್ದಂತೆಯೇ ಮಾಳಮಲ್ಲೇಶ್ವರ ದೇವರ ಮೂರ್ತಿಯನ್ನು ಗರ್ಭಗುಡಿಯಿಂದ ಹೊರ ತರಲಾಗುತ್ತೆ. ಆ ವೇಳೆ ನೆರೆದ ಹತ್ತಾರು ಗ್ರಾಮಗಳ ಭಕ್ತರು, ದೇವರನ್ನು ತಮ್ಮೂರಿಗೆ ಕರೆದೊಯ್ಯಲು ಶಕ್ತಿ ಪ್ರದರ್ಶನಕ್ಕಿಳಿಯುತ್ತಾರೆ. ಪರಸ್ಪರ ಬಡಿಗೆಯಿಂದ ಬಡಿದಾಡುತ್ತಾರೆ.
ಈ ಬಾರಿಯ ಬಡಿದಾಟದಲ್ಲಿ 100ಕ್ಕೂ ಹೆಚ್ಚು ಮಂದಿ ಈ ಬಡಿದಾಟದಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತದೆ.
ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ಭಕ್ತರು ಪೊಲೀಸರ ಸಮ್ಮುಖದಲ್ಲೇ ಬಡಿದಾಡಿದರೂ ಯಾರ ವಿರುದ್ದವೂ ಕೇಸ್ ದಾಖಲಿಸುವುದಿಲ್ಲ. ಯಾಕೆಂದರೆ ಇದು ಅನಾದಿಕಾಲದಿಂದಲೂ ನಡೆಯುತ್ತಾ ಬಂದಿರುವ ಸಾಂಪ್ರದಾಯಿಕ ಜಾತ್ರೆ ಎಂಬುದು ಸ್ಥಳೀಯರ ಸಮರ್ಥನೆ.