ದೇವನಹಳ್ಳಿ : ಪ್ರೇಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟ್ ನ ವಿಲ್ಲಾದಲ್ಲಿ ವಾಸವಾಗಿದ್ದ ಪುಟ್ ಬಾಲ್ ಆಟಗಾರನ ಪತ್ನಿ ಬೆಡ್ ರೂಮ್ ನುಗ್ಗಿದ ಕಳ್ಳರು 22 ಲಕ್ಷದ ವಜ್ರಾಭರಣ ದೋಚಿ ಪರಾರಿಯಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ನಂದಿರಸ್ತೆಯಲ್ಲಿರುವ ಪ್ರೇಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟ್ ನ ವಿಲ್ಲಾ ನಂಬರ್ 175 ರಲ್ಲಿ ಪುಟ್ ಬಾಲ್ ಆಟಗಾರ ವೊಹಾನ್ ಟ್ರೋಲಪಿ ವಾಸವಾಗಿದ್ದು, ಪುಟ್ ಬಾಲ್ ಆಡಲು ಹೊರಗೆ ಹೋಗಿದ್ದ ವೊಹಾನ್ ದಿನಾಂಕ 20 -08-21ರ ತಡರಾತ್ರಿ ವಿಲ್ಲಾಗೆ ಬಂದು ಮಲಗಿದ್ದಾರೆ, ಮರುದಿನ ಬೆಳಗ್ಗೆ ಕಿಚನ್ ನ ಬಾಗಿಲು ತೆರೆದಿದ್ದು ಸೊಳ್ಳೆ ಪರದೆಯನ್ನ ಹರಿದು ಹಾಕಲಾಗಿತ್ತು,
ಮನೆಯಲ್ಲಿ ಕಳ್ಳತನ ವಾಗಿರುವ ಅನುಮಾನ ಪಟ್ಟು ವಿದೇಶದಲ್ಲಿರುವ ಪತ್ನಿಗೆ ಪೋನ್ ಮಾಡಿ ಆಕೆಯ ಬೆಡ್ ರೂಮ್ ಪರಿಶೀಲನೆ ಮಾಡಿದ್ದಾಗ ವಾರ್ಡ್ ರೂಬ್ಸ್ ಗಳು ತೆರೆಯಲಾಗಿತ್ತು, 22 ಲಕ್ಷ ಮೌಲ್ಯದ ವಜ್ರಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯವಾಗಿ ಕೆಲಸ ಮಾಡುವ ಕಟ್ಟಡ ಕೂಲಿ ಕಾರ್ಮಿಕರ ಮೇಲೆ ಅನುಮಾನ ಪಟ್ಟಿರುವ ವೊಹಾನ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





















































