ದೆಹಲಿ: ‘ಹಿಂದೂ ರಾಷ್ಟ್ರ’ ಘೋಷಣೆಗೆ ನೀಡಿದ್ದ ಗಡುವು ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅವರು ಜಲ ಸಮಾಧಿಗೆ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸಬೇಕೆಂದು ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅವರು ಬಹುಕಾಲದಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಹಲವು ರೀತಿ ಪ್ರಾಣಾಹುತಿ ಯತ್ನ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಸ್ವಾಮೀಜಿ ಅಂತಿಮವಾಗಿ ಅಕ್ಟೋಬರ್ 2ರ ಗಡುವು ವಿಧಿಸಿದ್ದರು. ಆ ಗಡುವು ಇಂದಿಗೆ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಾಯು ನದಿಯಲ್ಲಿ ಜಲ ಸಮಾಧಿಯಾಗುವುದಾಗಿ ಶ್ರೀಗಳು ಹೇಳುತ್ತಿದ್ದಾರೆಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.
ಈ ನಡುವೆ, ಆಚಾರ್ಯ ಪರಮಹಂಸ ಸ್ವಾಮೀಜಿಯನ್ನು ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಅವರ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.
https://twitter.com/Interceptors/status/1444222087074181124
ಕೆಲ ಸಮಯದ ಹಿಂದೆ ‘ಹಿಂದೂ ರಾಷ್ಟ್ರ’ ಘೋಷಣೆಗೆ ಆಗ್ರಹಿಸಿ ಬೆಂಕಿಗೆ ಆಹುತಿಯಾಗಲು ಮುಂದಾಗಿದ್ದ ಇದೇ ಶ್ರೀಗಳನ್ನು ಅಯೋಧ್ಯೆಯ ಪೊಲೀಸರು ತಡೆದು ಗೃಹಬಂಧನದಲ್ಲಿ ಇರಿಸಿದ್ದರು. ಅನಂತರವೂ ಉಪವಾಸ ಸತ್ಯಾಗ್ರಹ ನಡೆಸಿದ ಶ್ರೀಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನವೊಲಿಸಿದ್ದರು. ಬಳಿಕ ತಮ್ಮ ಬೇಡಿಕೆ ಈಡೇರಿಕೆಗೆ ಅಕ್ಟೋಬರ್ 2ರ ಗಡುವನ್ನು ವಿಧಿಸಿದ್ದರು. ಇದೀಗ ಈ ಗಡುವು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿ ಪಾಳಯದಲ್ಲಿ ತಳಮಳದ ಸನ್ನಿವೇಶ ಸೃಷ್ಟಿಯಾಗಿದೆ.