ಬೆಂಗಳೂರು: ಮುಖ್ಯಮಂತ್ರಿ ಕುಟುಂಬದ ವಿರುದ್ದ ಆರೋಪ ಪ್ರತಿಧ್ವನಿಸುವಂತೆ ಮಾಡಿರುವ ಮೂಡಾ ಹಗರಣ ಇದೀಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಮೂಡಾ ಹಗರಣದಲ್ಲಿ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
VIDEO | Karnataka: BJP leaders stage protest at Vidhana Soudha in Bengaluru over not allowing discussion regarding the alleged fraudulent allotment of sites to land losers by Mysuru Urban Development Authority (MUDA), which involves plots given to CM Siddaramaiah’s wife.
The… pic.twitter.com/FoU3FCDsNR
— Press Trust of India (@PTI_News) July 24, 2024
ಈ ನಡುವೆ, ವಿಧಾನಸಭಾ ಅಧಿವೇಶನದಲ್ಲಿ ಮೂಡಾ ಹಗರಣ ಕುರಿತಂತೆ ಚರ್ಚೆಗೆ ಬಿಜೆಪಿ-ಜೆಡಿಎಸ್ ಬಿಗಿ ಪಟ್ಟು ಹಿಡಿದಿವೆ. ಬುಧವಾರ ಚರ್ಚೆಗೆ ಅವಕಾಶ ಸಿಗದೇ ಇದ್ದಾಗ ಗದ್ದಲ ಎಬ್ಬಿಸಿದ ಬಿಜೆಪಿ ಶಾಸಕರು, ಸದನದಲ್ಲಿ ಚರ್ಚೆಗೆ ಅವಕಾಶ ನೀಡುವವರೆಗೂ ಶಾಸಕರು ಅಹೋರಾತ್ರಿ ಧರಣಿ ನಡೆಸುವುದಾಗಿ ಪ್ರಕಟಿಸಿದರು. ಅದರಂತೆ, ಬುಧವಾರ ರಾತ್ರಿಯಿಡೀ ಬಿಜೆಪಿ-ಜೆಡಿಎಸ್ ಶಾಸಕರು ಸತ್ಯಾಗ್ರಹದಲ್ಲಿ ಕಾಲ ಕಳೆದರು. ರಾತ್ರಿಯಿಡೀ ಸದನದಲ್ಲಿಯೇ ತಂಗಿದ ಶಾಸಕರು, ಭಿನ್ನ, ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.
ವಿಧಾನಸೌಧದ ಕಾರಿಡಾರ್‌ನಲ್ಲಿ ಹಾಡು, ಭಜನೆ ಮೂಲಕ ಸರ್ಕಾರದ ನಡೆಯನ್ನು ಶಾಸಕರು ಖಂಡಿಸಿದರು. ಪ್ರತಿಪಕ್ಷ ನಾಯಕ ಆರ್. ಅಶೋಕ ವಾದ್ಯ ಮೊಳಗಿಸಿದರೆ, ಸಿ.ಟಿ.ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್ ಹೆಜ್ಜೆ ಹಾಕಿದ ಸನ್ನಿವೇಶ ಗಮನಸೆಳೆಯಿತು. ಭಜನೆ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟಿಸಿದರು.