(ವರದಿ: ರವಿಕುಮಾರ್)
ದಾವಣಗೆರೆ: ತರಳಬಾಳು ಬಡಾವಣೆಯಲ್ಲಿರುವ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿರುವ ಶ್ರೀ ವಿಶ್ವ ಬಂಧು ಮರಳು ಸಿದ್ದೇಶ್ವರರ ಕಾರ್ತಿಕೋತ್ಸವಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ 01.12.2025 ಸೋಮವಾರ ಸಂಜೆ 6:೦೦ಕ್ಕೆ ಸಿರಿಗೆರೆಯ
ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಉಗಳವರು ಚಾಲನೆ ನೀಡಲಿದ್ದಾರೆ.
ನಂತರ ಸಂಜೆ 6:30 ಗಂಟೆಗೆ ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿರುವ ಶ್ರೀ ವಿಶ್ವ ಬಂಧು ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಅನುಭವ ಮಂಟಪದ ಕದಳಿ ಮಹಿಳಾ ತಂಡದವರು ವಚನ ಗಾಯನವನ್ನು ಹಾಗೂ ದಾವಣಗೆರೆಯ ಎಸ್.ಪಿ.ಬಿ. ಮೆಲೋಡಿಯಸ್ ಗ್ರೂಪ್ ನಿಂದ ಭಕ್ತ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀ ವಿಶ್ವ ಬಂಧು ಮರುಳಸಿದ್ದೇಶ್ವರರ ಹಾಗೂ ಶ್ರೀ ತರಳಬಾಳು ಜಗದ್ಗುರುಳವರ ಕೃಪಾ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಕಾರ್ತಿಕೋತ್ಸವ ಸಮಿತಿ ಪ್ರಮುಖರು ಮನವಿ ಮಾಡಿದ್ದಾರೆ.

























































