ತುಂಗಭದ್ರೆಯ ಒಡಲು ಬಗೆದ ಕಿರಾತಕರು.. ಉದಯ ನ್ಯೂಸ್ ತಂಡ ಈ ಅಕ್ರಮದ ಬೆನ್ನತ್ತಿದರೆ, ಗಣಿ ಇಲಾಖೆಯ ಮಂತ್ರಿ ಮುರುಗೇಶ್ ನಿರಾಣಿ ನಿಷ್ಟೂರ ಕ್ರಮಕ್ಕೆ ಆದೇಶಿಸಿದ್ದಾರೆ. ಸಚಿವ ನಿರಾಣಿ ಕ್ಷಿಪ್ರ ಕ್ರಮಕ್ಕೆ ಸಾರ್ವಜನಿಕರ ಪ್ರಶಂಸೆ ವ್ಯಕ್ತವಾಗಿದೆ..
ವರದಿ: ಹೆಚ್ ಎಂ ಪಿ ಕುಮಾರ್
ದಾವಣಗೆರೆ: ಹರಿಹರ ತಾಲ್ಲೂಕಿನಲ್ಲಿ ಗಣಿ ಇಲಾಖೆ ಕಣ್ಣಿಗೆ ಮಣ್ಣೆರಚಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಇಲಾಖೆ ಅಧಿಕಾರಿಗಳು ಸಿಡಿದೆದ್ದಿದ್ದಾರೆ. ತುಂಗಭದ್ರೆ ಒಡಲನ್ನು ಬಗೆದು ಅಕ್ರಮವಾಗಿ ಮರಳು ಕಳ್ಳತನ ಮಾಡುತ್ತಿದ್ದ ಬಗ್ಗೆ ಉದಯ ನ್ಯೂಸ್ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಮರಳು ಅಡ್ಡೆಗಳ ಮೇಲೆ ದಾಳಿ ಕೈಗೊಂಡಿದ್ದಾರೆ.
ಮರಳು ಅಕ್ರಮ ಕುರಿತ ಆರೋಪ ಬಗ್ಗೆ ಪರಾಮರ್ಶೆ ನಡೆಸಿದ ಗಣಿ ಸಚಿವ ಮುರುಗೇಶ್ ನಿರಾಣಿಯವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ತಮ್ಮ ಇಲಾಖೆಯಲ್ಲಿ ಈ ರೀತಿಯ ಅಕ್ರಮ ಮುಂದುವರಿದಲ್ಲಿ ಅಧಿಕಾರಿಗಳನ್ನೇ ಹೊಣೆಯಾಗಿಸುವ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬೆಚ್ಚಿಬಿದ್ದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆಗಿಳಿದು ಮರಳು ಅಕ್ರಮದ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.
ಪ್ರಸ್ತುತ, ಅಕ್ರಮ ಕುರಿತ ವರದಿ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ರಾತ್ರಿ ವೇಳೆ ದಾಳಿ ನಡೆಸಿದೆ. ರಾತ್ರಿ ವೇಳೆ ಅಧಿಕಾರಿಗಳ ಕಣ್ಣು ತಪ್ಪಿಸಿ ಮರಳನ್ನ ಲೂಟಿ ಮಾಡಲಾಗುತ್ತಿತ್ತು. ಇದೀಗ ಸಚಿವ ಮುರುಗೇಶ ನಿರಾಣಿಯವರ ಖಡಕ್ ಸೂಚನೆ ನಂತರ ಪ್ರತಿದಿನ ನದಿ ತಟದ ಗ್ರಾಮದಲ್ಲಿ ಗಸ್ತು ನಡೆಸಲಾಗುತ್ತಿದೆ. ಹರಿಹರ ತಾಲ್ಲೂಕಿನ ಮಲೆಬೆನ್ನೂರು ಬಳಿ 20 ಕ್ಕೂ ಹೆಚ್ಚು ಲಾರಿ ಲೋಡ್ ಮರಳನ್ನ ಜಪ್ತಿ ಮಾಡಿರುವ ಅಧಿಕಾರಿಗಳು ಒಂದು ಟಿಪ್ಪರ್ ಮೇಲೂ ಕೇಸ್ ದಾಖಲಿಸಲಿಸಿದ್ದಾರೆ.
ಅಕ್ರಮವಾಗಿ ರಾತ್ರಿ ವೇಳೆ ಗಣಿ ಇಲಾಖೆಯ ಗಮನಕ್ಕೆ ಭಾರದೇ ಕೆಲ ಅಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು ನೀರುತ್ತಿದ್ದರೆನ್ನಲಾಗುತ್ತಿದ್ದು ಅವರಿಗೂ ನಿರಾಣಿ ಸಾಹೇಬ್ರು ಬಿಸಿ ಮುಟ್ಟಿಸಿದ್ದಾರೆ ಎಂದು ಇಲಾಖೆಯ ಸಿಬ್ಬಂದಿ ಹೇಳಿಕೊಂಡಿದ್ದಾರೆ.
ಅಕ್ರಮ ಮರಳುಗಾರಿಕೆ ತಡೆಯಲು ಕಂದಾಯ, ಪೋಲಿಸ್, ಗಣಿ ಇಲಾಖೆ, ಸಾರಿಗೆ ಇಲಾಖೆಯ ಸಹಭಾಗಿತ್ವದಲ್ಲಿ ಟಾಸ್ಕ್ ಫೊರ್ಸ್ ರಚನೆಯಾಗಿದ್ದರೂ ಎಲ್ಲಾ ಇಲಾಖೆಯ ಅಧಿಕಾರಿಗಳ ಹೊಂದಾಣಿಕೆಯ ಕೊರತೆಯಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು.
ಉದಯ ನ್ಯೂಸ್ ಈ ಅಕ್ರಮದ ಬಗ್ಗೆ ಸುದ್ದಿ ಮಾಡಿ ಮರಳು ಅಕ್ರಮದ ವಿರಾಟ್ ಸ್ವರೂಪವನ್ನೇ ಅನಾವರಣ ಮಾಡಿತ್ತು.
ರಾತ್ರಿ ದಂಧೆಯ ಬೆನ್ನತ್ತಿದ ದಾವಣಗೆರೆಯ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೊದಂಡರಾಮಯ್ಯ ನೇತೃತ್ವದಲ್ಲಿ ಮಲೆಬೆನ್ನೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೀರಬಸಪ್ಪ ಕುಸಲಾಪುರ ಹಾಗೂ ಸ್ಥಳೀಯ ಕಂದಾಯ ಅಧಿಕಾರಿಗಳ ತಂಡ ಕಾರ್ಯಾಚರಣೆಗಿಳಿದಿದೆ. ಹರಿಹರ ತಾಲ್ಲೂಕಿನಲ್ಲಿ ಹಾದುಹೋಗಿರುವ ತುಂಗಭದ್ರ ನದಿ ತಟದಲ್ಲಿರುವ ಸಾರಥಿ, ಗುತ್ತೂರು, ಮಲೆಬೆನ್ನೂರು ಸೇರಿದಂತೆ ಅಕ್ರಮ ಮರಳುಗಾರಿಕೆಗೆ ಸಧ್ಯ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ.. ತುಂಗಭದ್ರೆಯ ಒಡಲು ಬಗೆಯುತ್ತಿರುವ ನಿರ್ದಯಿಗಳು..