ಮಂಗಳೂರು: ಕರಾವಳಿ ಮಲೆನಾಡಿನಲ್ಲಿ ಮಳೆ ಭೋರ್ಗರೆತ ಮುಂದುವರಿದಿದೆ. ಮಳೆ ಸಂಬಂಧಿತ ಅವಘಡಗಳೂ ಸಂಭವಿಸಿವೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಶುಕ್ರವಾರವೂ (ಜು.7) ರಜೆ ಘೋಷಿಸಲಾಗಿದೆ.
ಕರಾವಳಿಯಾಧ್ಯಂತ ಭಾರಿ ವರ್ಷಧಾರೆಯಾಗುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಪದವಿ, ಸ್ನಾತಕೋತ್ತರ, ಡಿಪ್ಲೋಮಾ, ಐಟಿಐ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ.
ಉಡುಪಿ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೂ ಜಿಲ್ಲಾಡಳಿತ ರಜೆ ಘೋಷಿಸಲಾಗಿದೆ. ಅಷ್ಟೇ ಅಲ್ಲ, ಮಳೆ ಸಂದರ್ಭದಲ್ಲಿ ನೀಡಲಾಗಿರುವ ರಜೆಯನ್ನು ಮುಂಬರುವ ರಜಾದಿನಗಳಲ್ಲಿ ಸರಿದೂಗಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.
ನಿರಂತರ ಮಳೆಯಾಗುತ್ತಿರುವುದರಿಂದ ತಗ್ಗುಪ್ರದೇಶಗಳು ಜಲಾವ್ರತವಾಗಿವೆ. ನದಿಗಳೂ ಭೋರ್ಗರೆದು ಹರಿಯುತ್ತಿವೆ. ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ನದಿ ಮತ್ತು ಸಮುದ್ರ ತೀರಕ್ಕೆ ತೆರಳದಂತೆ ಪ್ರವಾಸಿಗರಿಗೆ ಮುನ್ಸೂಚನೆ ನೀಡಲಾಗಿದೆ.
ಇನ್ನೊಂದೆಡೆ, ಕರಾವಳಿಯ ಪ್ರಮುಖ ದೇಗುಲಗಳೂ ಜಲ ದಿಗ್ಬಂಧನಕ್ಕೊಳಗಾಗಿದ್ದು, ದೇವರ ದರ್ಶನ ಪಡೆಯಲು ಭಕ್ತರು ಪರದಾಡುವಂತಾಗಿದೆ. ಶ್ರೀ ಕ್ಷೇತ್ರ ಬಪ್ಪನಾಡು ದೇಗುಲದೊಳಗೆ ನೀರು ನುಗ್ಗಿದ್ದು ಭಕ್ತರ ದೇಗುಲಭೇಟಿಯೂ ವಿರಳವಾಗಿದೆ.
Bapanadu Temple🙏 pic.twitter.com/tVrFLqQX1w
— Smt. Kanthi Shetty (Modi Ka Parivar) (@ShettyKanthi) July 6, 2023
ನಂದಿನಿ ನದಿಯಲ್ಲಿ ನೀರಿನ ಪ್ರವಾಹದ ರಭಸ ಜೋರಾಗಿದೆ. ನದಿ ನೀರಿನ ನಡುವೆ ದೇಗುಲದ ವಿಹಂಗಮ ನೋಟ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಕ್ತರ ಕುತೂಹಲದ ಕೇಂದ್ರಬಿಂದುವಾಗಿದೆ.
ಭೋರ್ಗರೆದು ಹರಿಯುತ್ತಿರುವ
ನಂದಿನಿ ನದಿಯ ನಡುವೆ
'ಶ್ರೀ ಕಟೀಲು ದೇಗುಲ' ಹೀಗಿದೆ ನೋಡಿ..
View of Kateel Temple in Drone Camara.. @TheShilpaShetty @nalinkateel @KateelShri @mahathme @LokaMithya @ShettyKanthi @OfTulunad @VisitUdupi @livelymangalore pic.twitter.com/Uii5DQhS31— jayaa (@unsocial2023) July 6, 2023