ಮಂಗಳೂರು: ದಕ್ಷಿಣಕನ್ನಡ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 109 ನೇ ಸಂಸ್ಥಾಪನಾ ದಿನವನ್ನು ಮೇ 5 ರಂದು ಮಂಗಳೂರು SDM ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ಸಮಾರಂಭ ಉದ್ಘಾಟಿಸಿದ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕನ್ನಡದ ಮನಸ್ಸುಗಳನ್ನು ಒಂದು ಮಾಡುವಲ್ಲಿ ಕಸಾಪದ ಕೆಲಸ ಅದ್ಭುತ ಎಂದು ಶ್ಲಾಘಿಸಿ, ಭಾಷೆ ಬಗ್ಗೆ ನಮಗೆ ಅಭಿಮಾನ ಬಹಳ ಮುಖ್ಯ ಈ ನಿಟ್ಟಿನಲ್ಲಿ ನಮ್ಮ ಮುಂದಿನ ಜನಾಂಗಕ್ಕೆ ಇದನ್ನು ಹಸ್ತಾಂತರಿಸಲು ನಾವು ಸಿದ್ಧರಾಗಬೇಕೆಂದು ಎಂದು ತಿಳಿಸಿದರು.ಅತೀ ಶೀಘ್ರ ಕನ್ನಡ ಭವನ ಮಂಗಳೂರಿನಲ್ಲಿ ನಿರ್ಮಾಣವಾಗಲಿ ಎಂದು ಆಶಿಸಿದರು.
ವಿಶೇಷ ಉಪನ್ಯಾಸ ನೀಡಿದ ಪುಂಡಿಕೃ ಗಣಪತಿ ಭಟ್, ಕನ್ನಡದ ಆಸ್ಮಿತೆ ಮತ್ತು ಕಸಾಪದ ಕೆಲಸದ ಬಗ್ಗೆ ಬೆಳಕು ಚೆಲ್ಲಿದರು. ಕನ್ನಡದ ನಾಡಗೀತೆಯ ಅವಿಚ್ಚಿನ ಭಾವದ ಜೊತೆಗೆ ರಾಷ್ಟ್ರಗೀತೆಗೆ ಸರಿಸಮನವಾಗಿ ಅದು ಕನ್ನಡಿಗರರನ್ನು ಇಂದಿಗೂ ಸೆಳೆಯುತ್ತಿರುವ ಬಗ್ಗೆ ಹೆಮ್ಮೆ ಪಟ್ಟರು. ಕಸಾಪ ಸ್ಥಾಪನೆ ಮಾಡಿ ಅದನ್ನು ಬೆಳೆಸಿದ ಎಲ್ಲ ಹಿರಿಯರ ದೂರದೃಷ್ಟಿತ್ವವನ್ನು ಕೊಂಡಾಡಿದರು.
ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ ಎಂ ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಮಾಧವ ಎಂ ಕೆ ಪ್ರಸ್ತಾವನೆಗೈದರು. ವಿಜಯಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಕಸಾಪ ಅಧ್ಯಕ್ಷ ಮಂಜುನಾಥ ರೇವಣಾಕರ್ ಸ್ವಾಗತಿಸಿದರು. ಪದಾಧಿಕಾರಿ ಖಾಲಿದ್ ಉಜಿರೆ ನಿರ್ವಹಿಸಿದರು, ಕಿರಣ್ ರೈ ವಂದಿಸಿದರು.