ಮಂಗಳೂರು: ತೀವ್ರ ಜಿದ್ದಾಜಿದ್ದಿನ ಅಖಾಡವೆನಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಚುರುಕಾಗಿದೆ. ಖಾಲೀದಾ ಹಲವು ದಶಕಗಳಿಂದ ಬಿಜೆಪಿಯ ಹಿಡಿತದಲ್ಲಿರುವ ಈ ಕ್ಷೇತ್ರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದೆ. ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ನಡುವೆ ನೇರ ಹೋರಾಟ ನಡೆದಿರುವಂತೆ ಕಂಡುಬರುತ್ತಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅಭ್ಯರ್ಥಿಗಳ ಪಟ್ಟಿ:
-
ಅಲಂಗಾರ (ಬಿಎಸ್ ಪಿ),
-
ಕ್ಯಾಪ್ಟನ್ ಬ್ರಿಜೇಶ್ ಚೌಟ (ಬಿಜೆಪಿ),
-
ಪದ್ಮರಾಜ್ ಆರ್ (ಕಾಂಗ್ರೆಸ್),
-
ಕಾಂತಪ್ಪ ರಂಜನಿ ಎಂ (ಕರ್ನಾಟಕ ರಾಷ್ಟ್ರ ಸಮಿತಿ),
-
ಕೆ.ಇ. ಮನೋಹರ (ಉತ್ತಮ ಪ್ರಜಾಕೀಯ ಪಕ್ಷ),
-
ದುರ್ಗಾಪ್ರಸಾದ್ (ಕರುನಾಡ ಸೇವಕ ಪಕ್ಷ),
-
ದೀಪಕ್ ರಾಜೇಶ್ ಕುವೆಲ್ಲೊ (ಪಕ್ಷೇತರ),
-
ಮೆಕ್ಸಿಂ ಪಿಂಟೊ (ಪಕ್ಷೇತರ), ಸುಪ್ರೀತ್ ಕುಮಾರ್ (ಪಕ್ಷೇತರ).
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ 9.30 ಲಕ್ಷ ಮಹಿಳೆಯರು, 8.87 ಲಕ್ಷ ಪುರುಷರು ಸೇರಿದಂತೆ ಒಟ್ಟು 18.18 ಲಕ್ಷ ಮತದಾರರು ಇದ್ದಾರೆ. ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ವ್ಯವಸ್ಥೆ ಮಾಡಿದ್ದು, 163 ವಲ್ನರೆಬಲ್ ಮತಗಟ್ಟೆಗಳು, 8 ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ 1,876 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಿಗಿ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ.
-
2019ರ ಚುನಾವಣೆಗೆ ಹೋಲಿಸಿದರೆ ಈಬಾರಿ 83,401 ಮತದಾರರುಹೆಚ್ಚಾಗಿದ್ದಾರೆ.
-
ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ 43,385 ಮತದಾರರು ಹಕ್ಕು ಹೊಂದಿದ್ದಾರೆ.
-
2019ರ ಚುನಾವಣೆಯಲ್ಲಿ 13.45 ಲಕ್ಷ ಮತದಾರರು ಹಕ್ಕನ್ನು ಚಲಾಯಿಸಿದ್ರು.
-
2019ರ ಚುನಾವಣೆಯಲ್ಲಿ ಶೇ 77.97ರಷ್ಟು ಮತದಾನವಾಗಿತ್ತು.
-
ಈವರೆಗಿನ 17 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ 9 ಬಾರಿ ಕಾಂಗ್ರೆಸ್, 8 ಬಾರಿ ಬಿಜೆಪಿ ಅಭ್ಯರ್ಥಿಗಳ ಗೆಲುವು,
-
1991ರ ಚುನಾವಣೆ ಬಳಿಕ ಸತತವಾಗಿ ಬಿಜೆಪಿ ಅಭ್ಯರ್ಥಿಗಳ ಗೆಲುವು