ದೊಡ್ಡಬಳ್ಳಾಪುರ : ಬೆಂಗಳೂರು ಹುಡುಗರು ಸೈಕಲ್ ನಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಲು ಹೊರಟ್ಟಿದ್ದಾರೆ, 180 ದಿನಗಳಲ್ಲಿ ಅವರು 29 ರಾಜ್ಯ 3 ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿ 24000 ಕಿ.ಮೀ ಪ್ರಯಾಣ ಮಾಡಲಿದ್ದಾರೆ, ಸೈಕಲ್ ನಲ್ಲಿ ಒಂದು ದೇಶದಲ್ಲಿ ಮಾಡಿದ ಅತಿ ಉದ್ದದ ಪ್ರಯಾಣವಾಗಲಿದೆ.
ಬೆಂಗಳೂರಿನ ಕಾಡುಗೋಡಿಯ ಧನುಷ್ ಎಂ, ಯಾದಗೊಂಡನಹಳ್ಳಿಯ ಹೇಮಂತ್ ಬಿ.ವೈ ಸೈಕಲ್ ನಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಲು ಹೊರಟ ಯುವಕರು, ನಂದಿಬೆಟ್ಟ, ಕೇರಳ, ಮಂಗಳೂರು ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಇವರು ಸೈಕಲ್ ನಲ್ಲಿ ಹೋಗಿ ಬರುತ್ತಿದ್ದರು, ಇದರ ನಡುವೆ ಇಬ್ಬರಿಗೂ ಸೈಕಲ್ ನಲ್ಲಿ ಏನಾದರೂ ಸಾಧನೆ ಮಾಡುವ ಅಲೋಚನೆ ಬಂದಿದೆ, ಸದುದ್ದೇಶ ಇಟ್ಟು ಕೊಟ್ಟು ಸಾಧನೆ ಮಾಡುವ ಅಲೋಚನೆಯಲ್ಲಿದ್ದ ಇವರಿಗೆ ಸೈಕಲ್ ನಲ್ಲಿ ಇಡೀ ದೇಶ ಸುತ್ತುವ ಉಪಾಯ ಹೊಳೆದಿದೆ, ಸೈಕಲ್ ನಲ್ಲಿ ದೇಶದ ಅತಿ ಉದ್ದನೇಯ ಪ್ರಯಾಣ ಮಾಡುವ ತಯಾರಿ ನಡೆಸಿದರು, 180 ದಿನಗಳಲ್ಲಿ 29 ರಾಜ್ಯ 3 ಕೇಂದ್ರಾಡಳಿತ ಪ್ರದೇಶ ಭೇಟಿ ನೀಡುವ ಇವರು ಒಟ್ಟು 24 ಸಾವಿರ ಕಿ.ಮೀ ಕ್ರಮಿಸಲಿದ್ದಾರೆ, ಪ್ರಯಾಣ ಪೂರ್ಣವಾದಾಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇವರ ಹೆಸರಲ್ಲಿರಲಿದೆ.
ಸೈಕಲ್ ಪ್ರಯಾಣದ ಜೊತೆ ಜಾಗತಿಕ ತಾಪಮಾನ ಮತ್ತು ಸಾಕ್ಷರೆಯ ಬಗ್ಗೆ ಜಾಗೃತಿ ಮೂಡಿಸುವರು, ತಮ್ಮ ಪ್ರಯಾಣದ ನಡುವೆ ಸಿಗುವ ಶಾಲೆಗಳಲ್ಲಿ ಜಾಗತಿಕ ತಾಪಮಾನ ಮತ್ತು ಸಾಕ್ಷರೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಬೆಂಗಳೂರು ರೋಟರಿ ಕ್ಲಬ್ ಸಹಕಾರದೊಂದಿಗೆ ಇವರ ಸೈಕಲ್ ಪ್ರಯಾಣ ಸಾಗಲಿದೆ, ಅಂದಹಾಗೆ ಅಪರಿಚಿತ ಸ್ಥಳಗಳಲ್ಲಿ 180 ದಿನಗಳ ಪ್ರಯಾಣ ಅಷ್ಟು ಸುಲಭವಾಲ್ಲ, ಬಿಸಿಲು, ಮಳೆ , ಚಳಿಯನ್ನ ಎದುರಿಸ ಬೇಕು ಇದಕ್ಕಾಗಿ ತಯಾರಿ ಸಹ ಮಾಡಿಕೊಂಡಿದ್ದಾರೆ,
ವಿಶೇಷವಾದ ರೈನ್ ಕೋಟ್, ಟೆಂಟ್, ಬೇಗನೆ ಒಣಗುವ ಬಟ್ಟೆಗಳು ಮತ್ತು ಹೊಸ ಸೈಕಲ್ ಖರೀದಿ ಮಾಡಿದ್ದಾರೆ, ಪ್ರತಿದಿನ 120 ಕಿ.ಮೀ ಪ್ರಯಾಣ ಮಾಡಲಿದ್ದು, ರಾತ್ರಿ ಸಮಯವನ್ನು ಪೊಲೀಸ್ ಸ್ಟೇಷನ್, ಪೆಟ್ರೋಲ್ ಬಂಕ್ ಮತ್ತು ಶಾಲೆಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ, ಅಲ್ಲಿಯೇ ಸ್ನಾನ ಮಾಡಿ ಅಂದಿನ ಪ್ರಯಾಣ ಮುಂದುವರಿಸುತ್ತಾರೆ, ಇವರ ಸೈಕಲ್ ಸವಾರಿ ಬಗ್ಗೆ ಐವರ ತಂಡ ಸದಾ ನಿಗಾವಹಿಸಲಿದೆ, ಅವರ ಪ್ರಯಾಣವನ್ನ ಟ್ರ್ಯಾಕ್ ಮಾಡುವ ಮೂಲಕ ಅವರಿಗೆ ಮುಂದಿನ ಪ್ರಯಾಣದಲ್ಲಿ ಸಿಗುವ ಹೋಟೆಲ್, ವಿಶ್ರಾಂತಿ ಪಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡಲಿದೆ.
ಬೆಂಗಳೂರಿನಿಂದ ಸೈಕಲ್ ಸವಾರಿ ಹೊರಟ್ಟಿರುವ ಸ್ನೇಹಿತರು ದೊಡ್ಡಬಳ್ಳಾಪುರ, ಗೌರಿಬಿದನೂರು ಹೀಗೆ ಅವರ ಪ್ರಯಾಣ ದೇಶದ ನಾನಾ ರಾಜ್ಯಗಳಿಗೆ ಸಾಗಲಿದೆ, ಅವರ ಪ್ರಯಾಣ ಅಂತ್ಯವಾದಾಗ ಸೈಕಲ್ ನಲ್ಲಿ ಅತಿ ಉದ್ದನೇಯ ಪ್ರಯಾಣ ಮಾಡಿದ ಸಾಧನೆ ಅವರ ಹೆಸರಲ್ಲಿರಲಿದೆ, ಅವರ ಈ ಸಾಧನೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಇರಲಿದೆ.