ಯಲಹಂಕ: ದೇಶದ ಭದ್ರತೆಯಲ್ಲಿ ಸಿ.ಆರ್.ಪಿ.ಎಫ್ ಮಹತ್ತರ ಪಾತ್ರ ವಹಿಸುತ್ತಿದೆ. ದೇಶದಲ್ಲಿ ಹಲವು ರೀತ್ಯ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಲ್ಲಿ ಸಿ.ಆರ್.ಪಿ.ಎಫ್ ಮಹತ್ತರ ಕೊಡುಗೆ ನೀಡಿದೆ ಎಂದು ದಕ್ಷಿಣ ವಲಯ ಐ.ಜಿ.ಪಿ ಎಂ.ಕೆ.ರವೀಂದ್ರ ಪ್ರಶಂಸಿಸಿದ್ದಾರೆ.
ಮೂಲತಹ ಹಾಸನ ಜಿಲ್ಲೆಯವರಾದ ಎಂ.ಕೆ.ರವೀಂದ್ರ ಯಲಹಂಕ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹುತಾತ್ಮ ಯೋಧರ ನೆನಪಿಗಾಗಿ ಹಲವು ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಿ.ಆರ್.ಪಿ.ಎಫ್ ಪಡೆಗೆ 83 ವರ್ಷಗಳ ಹಿತಿಹಾಸ ಹೊಂದಿರುವ ನೆನಪಿಗಾಗಿ ಶ್ರದ್ಧಾಂಜಲಿ ಸಲ್ಲಿಸಿ, ಉತ್ತಮ ಸೇವೆ ಸಲ್ಲಿಸಿದ ಶಂಕರ್ ರೆಡ್ಡಿ, ಸಿ.ಪಿ.ಸುರೇಶ್, ಕಮಲೇಶ್, ಸಚಿನ್ ಮುಖರ್ಜಿ ಮತ್ತು ಎಂ.ಲೋಕೇಶ್ ಎಂಬ ಯೋಧರಿಗೆ ಉತ್ಕೃಷ್ಟ ಸೇವಾ ಪದಕ ನೀಡಿ ಐವರನ್ನು ಗೌರವಿಸಲಾಯಿತು.
ದೇಶದಲ್ಲಿ ಸಿ.ಆರ್.ಪಿ.ಎಫ್ ಅವಶ್ಯಕತೆ ಎಷ್ಟಿದೆ ಎಂದರೆ ಚುನಾವಣೆ, ಅಹಿತಕರ ಘಟನೆಗಳು, ಪ್ರವಾಹ, ದೇಶದ ಗಡಿ ಭದ್ರತೆಗೆ, ಉಗ್ರವಾದ ಹತೋಟಿ ಸೇರಿದಂತೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಸಿ.ಆರ್.ಪಿ.ಎಫ್ ಅವಶ್ಯಕತೆ ಮತ್ತು ಸೇವೆ ಶ್ಲಾಘನೀಯ ಎಂದು ಎಂ.ಕೆ.ರವೀಂದ್ರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಉತ್ಕೃಷ್ಟ ಪದಕ ವಿಜೇತ ಸೈನಿಕರು ಸಂತಸ ವ್ಯಕ್ತಪಡಿಸಿದ್ದು, ದೇಶದ ಭದ್ರತೆ ಮತ್ತು ನಮ್ಮ ಜವಾಬ್ದಾರಿ ಹೆಚ್ಚು ಮಾಡುವಲ್ಲಿ ಪ್ರಶಸ್ತಿಗಳು ಮಹತ್ತರ ಪಾತ್ರ ವಹಿಸುತ್ತದೆ, ಜವಾಬ್ದಾರಿ ಹೆಚ್ಚಿಸಿದ್ದು ಸೇವೆಯನ್ನು ಪರಿಗಣಿಸಿ ನೀಡಿದ ಪದಕ ನಮ್ಮ ಜವಾಬ್ದಾರಿ ಜೊತೆಗೆ ಬದ್ದತೆ ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.