ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಉಮೇಶ್, ಬಿ.ವೈ.ವಿಜಯೇಂದ್ರ ಆಪ್ತ ಅರವಿಂದ್ ಸಹಿತ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಹಲವರು ಇದೀಗ ಐಟಿ ಅಧಿಕಾರಿಗಳ ಖೆಡ್ಡಾದಲ್ಲಿದ್ದಾರೆ. ನೀರಾವರಿ ಇಲಾಖೆಯ ಹಗರಣಗಳ ಆರೋಪದ ಬೆನ್ನಲ್ಲೇ ನಡೆದಿರುವ ಈ ಐಟಿ ದಾಳಿಯು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಈ ನಡುವೆ, ಕಾಂಗ್ರೆಸ್ ಪ್ರಯೋಗಿಸಿರುವ ಟ್ವೀಟಾಸ್ತ್ರ ಎಲ್ಲರ ಗಮನವನ್ನು ಕೇಂದ್ರೀಕರಿಸಿದೆ. ಬಿಜೆಪಿ ಸರ್ಕಾರವು ಭ್ರಷ್ಟಾಚಾರದ ಗುಂಡಿಗೆ ಬಿದ್ದಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಭ್ರಷ್ಟಾಚಾರದ ಗುಂಡಿಯೊಳಗೆ ಬಿದ್ದಿರುವ ಬಿಜೆಪಿ ಸರ್ಕಾರ ರಸ್ತೆಯ ಗುಂಡಿಗಳಿಗೆ ಜನರನ್ನು ಬಲಿ ಹಾಕುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ರಾಜ್ಯದಾದ್ಯಂತ ಪ್ರತಿ ದಿನವೂ ರಸ್ತೆ ಗುಂಡಿಗಳಿಂದಾಗಿ ಸಾವು ಸಂಭವಿಸುತ್ತಿದೆ. ಕರೋನಾದಿಂದ ಕೊಂದಿದ್ದಾಯ್ತು, ಇನ್ನೂ ಅದೆಷ್ಟು ಬಗೆಯಲ್ಲಿ ಜನರನ್ನು ಕೊಲ್ಲಲು ಯೋಚಿಸಿದೆಯೇ ಬಿಜೆಪಿ ಸರ್ಕಾರ?’ ಎಂದು ಪ್ರಶ್ನಿಸಿದೆ.
ಭ್ರಷ್ಟಾಚಾರದ ಗುಂಡಿಯೊಳಗೆ ಬಿದ್ದಿರುವ ಬಿಜೆಪಿ ಸರ್ಕಾರ ರಸ್ತೆಯ ಗುಂಡಿಗಳಿಗೆ ಜನರನ್ನು ಬಲಿ ಹಾಕುತ್ತಿದೆ.
ಬೆಂಗಳೂರು ಮಾತ್ರವಲ್ಲದೆ, ರಾಜ್ಯದಾದ್ಯಂತ ಪ್ರತಿ ದಿನವೂ ರಸ್ತೆ ಗುಂಡಿಗಳಿಂದಾಗಿ ಸಾವು ಸಂಭವಿಸುತ್ತಿದೆ.
ಕರೋನಾದಿಂದ ಕೊಂದಿದ್ದಾಯ್ತು, ಇನ್ನೂ ಅದೆಷ್ಟು ಬಗೆಯಲ್ಲಿ ಜನರನ್ನು ಕೊಲ್ಲಲು ಯೋಚಿಸಿದೆ @BJP4Karnataka ಸರ್ಕಾರ? pic.twitter.com/YEyZDPewAp
— Karnataka Congress (@INCKarnataka) October 9, 2021