ದೇಶಾದ್ಯಂತ ಕೊರೋನಾ ಹಾವಳಿ ಹೆಚ್ಚಾಗಿದ್ದು ಹಲವೆಡೆ ಕರ್ಫ್ಯೂ, ಲಾಕ್‌ಡೌನ್ ಸನ್ನಿವೇಶ ಸೃಷ್ಟಿಯಾಗಿದೆ. ಇದೇ ರೀತಿಯ ಸನ್ನಿವೇಶಗಳನ್ನೊಳಗೊಂಡ ‘ಲಾಕ್‌ಡೌನ್ ಟು ಅನ್‌ಲಾಕ್’ ಎಂಬ ಸಿನಿಮಾ ನಿರ್ಮಾಣವಾಗಿದೆ. ಡಿಫರೆಂಟ್ ಟೈಟಲ್‌ನ ಈ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಸುನೀಲ್ ಪಾಲ್ ನಿರ್ದೇಶನದ ‘ಲಾಕ್‌ಡೌನ್ ಟು ಅನ್‌ಲಾಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಇದು ಸಕತ್ ಮನರಂಜನೆ ಒದಗಿಸುತ್ತಿದೆ.