ಬೆಂಗಳೂರು: ಕೊರೋನಾ ವೈರಾಣು ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿಗೆ ಬಂದಿದೆ. ಕೆಲ ದಿನಗಳಿಂದ ಪಾಸಿಟಿವ್ ಕೇಸ್‌ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಾರಿಗೆ ಬರುವಂತೆ ಹೊಸ ನಿಯಮಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ ತಾತ್ಕಾಲಿಕ ಬಂದ್. 9ನೇ ತರಗತಿವರೆಗೆ ಶಾಲೆ ಬಂದ್. ವಿದ್ಯಾಗಮ ಸಹಿತ ಶೈಕ್ಷಣಿಕ ಚಟುವಟಿಕೆ ಬಂದ್, ಸಾರಿಗೆ ಬಸ್‌ಗಳಲ್ಲಿ ಆಸನ ಸಾಮರ್ಥ್ಯ ಮೀರಬಾರದು. ಸಿನಿಮಾ ಮಂದಿರಗಳು ಶೇಕಡಾ 50 ಮಾತ್ರ ಭರ್ತಿಗೆ ಅವಕಾಶ. ಬಾರ್-ರೆಸ್ಟೋರೆಂಟ್‌ಗಳಿಗೂ ಕೆಲವು ನಿರ್ಬಂಧ ವಿಧಿಸಲಾಗಿದೆ. ಏಪ್ರಿಲ್ 20ರವರೆಗೆ ಈ ನಿಯಮ ಜಾರಿಗೆ ಬರಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣಕನ್ನಡ, ಉಡುಪಿ, ಕಲಬುರಗಿ, ಧಾರವಾಡ, ಮೈಸೂರು, ಬೀದರ್ ಜಿಲ್ಲೆಗಳಲ್ಲಿ ಈ ಕಠಿಣ ನಿಯಮ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.