ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಆರೋಪಗಳ ಸುರಿಮಳೆಯಾಗುತ್ತಿದೆ. ಈ ನಡುವೆಯೇ ಬಿಜೆಪಿಯನ್ನು ಟೀಕಿಸುವ ಆತುರದಲ್ಲಿ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ.
ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷ ಪರೋಕ್ಷವಾಗಿ ಭಯೋತ್ಪಾದಕಿ ಎಂದು ನಿಂದಿಸಿದೆಯೇ ಎಂಬುದು ಬಿಜೆಪಿ ನಾಯಕರ ಆರೋಪ.
ಈ ಕುರಿತ ಟ್ವೀಟೊಂದು ಗಮನಸೆಳೆದಿದೆ. ‘ಉಗ್ರರನ್ನು ಮಟ್ಟ ಹಾಕುತ್ತ ಹುತಾತ್ಮರಾದ ಹೇಮಂತ್ ಕರ್ಕರೆಯವರ ಸಾವಿಗೆ ನನ್ನ ಶಾಪವೇ ಕಾರಣ ಎಂದಿದ್ದಾಕೆ ಭಯೋತ್ಪಾದಕಿ ಸಾದ್ವಿ’ ಎಂದು ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಹೇಳಿದೆ.
‘ಭಯೋತ್ಪಾದಕರನ್ನ ಭಯೋತ್ಪಾದಕರೇ ಸಮರ್ಥಿಸಬಲ್ಲರು ಹೊರತು ಬೇರೆಯವರಲ್ಲ. ಉಗ್ರರನ್ನು ಮಟ್ಟ ಹಾಕುತ್ತ ಹುತಾತ್ಮರಾದ ಹೇಮಂತ್ ಕರ್ಕರೆಯವರ ಸಾವಿಗೆ ನನ್ನ ಶಾಪವೇ ಕಾರಣ ಎಂದಿದ್ದಾಕೆ ಭಯೋತ್ಪಾದಕಿ ಸಾದ್ವಿ. ತನ್ನಂತೆಯೇ ಇದ್ದ ಮತ್ತೊಬ್ಬ ಉಗ್ರರನ್ನು ಕರ್ಕರೆಯವರು ಕೊಂದಿದ್ದಕ್ಕೆ ನೊಂದು ಶಾಪ ಕೊಟ್ಟಳೇ ಎಂದು ಪ್ರಶ್ನಿಸಿದೆ. ‘ತಾಲಿಬಾನಿಬಿಜೆಪಿ’ ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ಸಂದೇಶವನ್ನು ಪೋಸ್ಟ್ ಮಾಡಲಾಗಿದೆ.
ಭಯೋತ್ಪಾದಕರನ್ನ ಭಯೋತ್ಪಾದಕರೇ ಸಮರ್ಥಿಸಬಲ್ಲರು ಹೊರತು ಬೇರೆಯವರಲ್ಲ.
ಉಗ್ರರನ್ನು ಮಟ್ಟ ಹಾಕುತ್ತ ಹುತಾತ್ಮರಾದ ಹೇಮಂತ್ ಕರ್ಕರೆಯವರ ಸಾವಿಗೆ ನನ್ನ ಶಾಪವೇ ಕಾರಣ ಎಂದಿದ್ದಾಕೆ ಭಯೋತ್ಪಾದಕಿ ಸಾದ್ವಿ.
ತನ್ನಂತೆಯೇ ಇದ್ದ ಮತ್ತೊಬ್ಬ ಉಗ್ರರನ್ನು ಕರ್ಕರೆಯವರು ಕೊಂದಿದ್ದಕ್ಕೆ ನೊಂದು ಶಾಪ ಕೊಟ್ಟಳೇ @BJP4Karnataka!?#ತಾಲಿಬಾನಿಬಿಜೆಪಿ
— Karnataka Congress (@INCKarnataka) August 20, 2021
ಇದೇ ವೇಳೆ, ‘ಮಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನ ಸಂಸದೆ ಮಾಡಿ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನ ಜಾಹೀರುಪಡಿಸಿದೆ. ನೇಣುಗಂಬಕ್ಕೆ ಏರಬೇಕಾದಾಕೆಯನ್ನ ಪವಿತ್ರ ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದ್ದು ತಾಲಿಬಾನಿಬಿಜೆಪಿ. ಈ ಎರೆಡೂ ಬಗೆಯ ಮೂಲಭೂತವಾದಿಗಳದ್ದು ಒಂದೇ ರಕ್ತ’ ಎಂದೂ ವ್ಯಂಗ್ಯವಾಡಿದೆ.
ಮಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನ ಸಂಸದೆ ಮಾಡಿ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನ ಜಾಹೀರುಪಡಿಸಿದೆ.
ನೇಣುಗಂಬಕ್ಕೆ ಏರಬೇಕಾದಾಕೆಯನ್ನ ಪವಿತ್ರ ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದ್ದು #ತಾಲಿಬಾನಿಬಿಜೆಪಿ.
ಈ ಎರೆಡೂ ಬಗೆಯ ಮೂಲಭೂತವಾದಿಗಳದ್ದು ಒಂದೇ ರಕ್ತ!
— Karnataka Congress (@INCKarnataka) August 20, 2021