ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಮತ್ತೊಬ್ಬ ಸಚಿವ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆಯೇ? ‘ರಂಗೀಲಾಲನ ಹೆಣ್ಣು ಹೊನ್ನಿನ ಪ್ರೈವೇಟ್ ಲೋಕ ಎಂದೆನ್ನುತ್ತಾ ವಾಹಿನಿಯೊಂದು ಹರಿಯಬಿಟ್ಟಿರುವ ಪ್ರೊಮೋ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಈ ವೀಡಿಯೋ ಪೋಸ್ಟ್ ಬಗ್ಗೆ ನೆಟ್ಟಿಗರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಸುದ್ದಿ ವಾಹಿನಿಯ ಈ ಪ್ರೊಮೋವನ್ನು ಕಾಂಗ್ರೆಸ್ ಪಕ್ಷ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ‘ದುಡ್ಡು ಮಾತ್ರವಲ್ಲ, ಹೆಣ್ಮಕ್ಕಳನ್ನೂ ಕರೆಯುತ್ತಾರಂತೆ ಅಡ್ಜೆಸ್ಟ್ ಮಾಡ್ಕೋ ಅಂತಾರಂತೆ. ನಮಗೆ ಹೇಳೋಕೂ ನಾಚಿಕೆಯಾಗುತ್ತೆ..’ ಎಂಬ ಹೆಣ್ಣೊಬ್ಬಳ ಮಾತು ನಿಗೂಢತೆಗೆ ಸಾಕ್ಷಿಯಾಗಿದೆ. ‘ನಿಮ್ಗೆ ಪೋಸ್ಟ್ ಕೊಡಿಸ್ತೀವಿ, ನೀವು ಎಲ್ಲಾ ಥರದಲ್ಲೂ ಅಡ್ಜೆಸ್ಟ್ ಮಾಡಬೇಕು.. ಒಂದು ಗ್ರೂಪ್ ಡಿ ನೂ ಬಿಡಲ್ಲ ಸರ್. ಬಡತನದಿಂದ ಬರಂದಿರ್ತಾರೆ ಸರ್ ಅವ್ರಿಗೆ ಹೆದರಿಸಿ-ಬೆದರಿಸಿ..’ ಎಂಬ ನೋವಿನ ಕಥಾನಕವನ್ನು ಹೆಣ್ಣೊಬ್ಬಳು ಹೇಳಿಕೊಂಡಿದ್ದಾಳೆ. ಮಿನಿಸ್ಟರ್.ನ ಎದುರು ಹಾಕೊಂಡ್ರೆ ಸಾಯಿಸು ಬಿಡ್ತಾರೆ.. ಇಲ್ಲಾಂದ್ರೆ ಜೈಲಿಗೆ ಹಾಕ್ತಾರೆ.. ಎಂಬ ಕರಾಳ ಸಂಗತಿ ಈ ಪ್ರಮೋದಲ್ಲೇ ಅನಾವರಣವಾಗಿದೆ.
"ಯಾರೂ ಏಕಪತ್ನಿ ವ್ರತಸ್ಥರಲ್ಲ" ಎಂದು ತಮ್ಮ ಲೀಲಾವಿನೋಧವನ್ನು ಇತರರ ಮೇಲೂ ಆರೋಪಿಸಿದ್ದ ಸುಧಾಕರ್ ಅವರೇ,
ತಾವು ಸಿಡಿಗೆ ತಡೆಯಾಜ್ಞೆ ತಂದಿದ್ದರ ಹಿಂದಿನ ರಹಸ್ಯಗಳು ತೆರೆದುಕೊಳ್ಳುತ್ತಿವೆಯಲ್ಲ..ನೆರವು ಕೇಳಿ ಬಂದ ಹೆಣ್ಣುಮಕ್ಕಳು ಮಾಡಿಕೊಳ್ಳಬೇಕಾದ "ಅಡ್ಜಸ್ಟ್ಮೆಂಟ್" ಏನು?
ಕಮಿಷನ್ ಲೂಟಿಯ ಜೊತೆ, ಕಾಂಪ್ರಮೈಸ್ ಹಗರಣಗಳನ್ನೂ ನಡೆಸಿದ್ದೀರಾ? pic.twitter.com/XtHtMdzMNb
— Karnataka Congress (@INCKarnataka) April 28, 2023
ಈ ವೀಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ಯಾರೂ ಏಕಪತ್ನಿ ವ್ರತಸ್ಥರಲ್ಲ” ಎಂದು ತಮ್ಮ ಲೀಲಾವಿನೋಧವನ್ನು ಇತರರ ಮೇಲೂ ಆರೋಪಿಸಿದ್ದ ತಾವು ಸಿಡಿಗೆ ತಡೆಯಾಜ್ಞೆ ತಂದಿದ್ದರ ಹಿಂದಿನ ರಹಸ್ಯಗಳು ತೆರೆದುಕೊಳ್ಳುತ್ತಿವೆಯಲ್ಲ’ ಎಂದು ಕುಟುಕಿದೆ. ನೆರವು ಕೇಳಿ ಬಂದ ಹೆಣ್ಣುಮಕ್ಕಳು ಮಾಡಿಕೊಳ್ಳಬೇಕಾದ “ಅಡ್ಜಸ್ಟ್ಮೆಂಟ್” ಏನು? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಕಮಿಷನ್ ಲೂಟಿಯ ಜೊತೆ, ಕಾಂಪ್ರಮೈಸ್ ಹಗರಣಗಳನ್ನೂ ನಡೆಸಿದ್ದೀರಾ? ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದೆ.
ನೆಟ್ಟಿಗರಿಂದ ತರಾಟೆ..
ಆದರೆ, ಕಾಂಗ್ರೆಸ್ ಪಕ್ಷದ ಟೀಕೆಗೆ ನೆಟ್ಟಿಗರಿಂದ ಆಕ್ಷೇಪವೂ ವ್ಯಕ್ತವಾಗಿದೆ. ‘ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಪಡೆಯುವ ಹತಾಶೆಯಲ್ಲಿದೆ. ಅದಕ್ಕಾಗಿ ಇಂತಹ ಕೀಳು ಮಟ್ಟಕ್ಕೆ ಇಳಿದಿದೆ. ನಿಮ್ಮ ಸ್ವಾರ್ಥಕ್ಕಾಗಿ ಒಬ್ಬ ಒಳ್ಳೆಯ ರಾಜಕಾರಣಿಯ ಮಾನಹಾನಿ ಮಾಡಬೇಡಿ. ಕಾಂಗ್ರೆಸ್ಸಿಗೆ ನಾಚಿಕೆಯಾಗಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು, ‘ಈ ರೀತಿ ವಿಷಯಗಳಿಂದ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ.. ದಯವಿಟ್ಟು ವೈಯಕ್ತಿಕ ವಿಚಾರಗಳನ್ನು ನಿಮ್ಮ ತೀಟೆಗೆ ತರಬೇಡಿ’ ಎಂದು ಎದಿರೇಟು ನೀಡಿದ್ದಾರೆ.