ಬೆಂಗಳೂರು: ಮಂಗಳೂರು ಮೂಲದ ಪ್ರಾಧ್ಯಾಪಕಿ ಲವೀನಾ ಮಾರಿಯೆಟ್ ವೇಗಸ್ ಅವರು ಯಶೋಗಾಥೆ ಬರೆದಿದ್ದಾರೆ. ಅವರ ಸುದೀರ್ಘ ಸಂಶೋಧನೆ ಹಾಗೂ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ ಕ್ರೈಸ್ಟ್ ವಿಶ್ವವಿದ್ಯಾಲಯವು ಸಂತ ಜೋಸೆಫ್ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲವೀನಾ ಮಾರಿಯೆಟ್ ವೇಗಸ್ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ.
ಅಪರೂಪದಲ್ಲಿ ಅಪರೂಪದ ಸಂಶೋಧನೆ ಎಂಬ ಹೆಗ್ಗಳಿಕೆಗೆ ಲವೀನಾ ಮಾರಿಯೆಟ್ ವೇಗಸ್ ಪಾತ್ರರಾಗಿದ್ದಾರೆ. ‘ಮೋಡಿಫೈಡ್ ಮಲ್ಟಿ ವಾಲ್ಡ್ ಕಾರ್ಬನ್ ನಾನೊಟ್ಯೂಬ್ ಬೇಸ್ಡ್ ಸಿಸ್ಟಮ್ಸ್ ಫಾರ್ ಕ್ಯಾಟಲಿಸ್ಟ್ ಅಂಡ್ ಟ್ರಾನ್ಸ್ಪರೆಂಟ್ ಕಂಡಕ್ಟಿಂಗ್ ಎಲೆಕ್ಟ್ರೋಡ್ ಅಪ್ಲಿಕೇಶನ್ ‘ (MODIFIED MULTIWALLED CARBON NANOTUBE BASED SYSTEMS FOR CATALYTIC AND TRANSPARENT CONDUCTING ELECTRODE APPLICATIONS) ಎಂಬ ವಿಷಯದಲ್ಲಿ ಇತ್ತೀಚೆಗಷ್ಟೇ ಮಂಡಿಸಿರುವ ಸಂಶೋಧನಾ ಮಹಾ ಪ್ರಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮಸೆಳೆದಿದೆ. ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಪರಿಣಿತ ಶಿಕ್ಷಣ ತಜ್ಞರು ಈ ಮಹಾಪ್ರಬಂಧವನ್ನು ಶ್ಲಾಘಿಸಿ, ತತ್ವಜ್ಞಾನಿಗಳ ಸಾಲಿಗೆ ಲವೀನಾ ಮಾರಿಯೆಟ್ ವೇಗಸ್ ಅವರನ್ನು ಗುರುತಿಸಿದ್ದಾರೆ.
ಈ ಶಿಫಾರಸುಗಳನ್ನು ಆಧರಿಸಿ ಪ್ರತಿಷ್ಠಿತ ಕ್ರೈಸ್ಟ್ ವಿಶ್ವವಿದ್ಯಾಲಯವು ಲವೀನಾ ಮಾರಿಯೆಟ್ ವೇಗಸ್ ಅವರಿಗೆ ಪಿಎಚ್.ಡಿ ಪದವಿಯನ್ನು ಪ್ರಕಟಿಸಿದೆ ಎಂದು ವಿವಿ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಮಂಗಳೂರಿನ ಕುಡುಪು ಮೂಲದ ಲವೀನಾ ಮಾರಿಯೆಟ್ ವೇಗಸ್ ಅವರು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ ಡಾ.ಮೋತಿ ಕೃಷ್ಣಮೋಹನ್ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದು, ಡಾಕ್ಟರ್ ಆಫ್ ಫಿಲಾಸಫಿ ಪದವಿಗೆ ಪಾತ್ರವಾಗಿರುವ ಗುರು-ಶಿಷ್ಯೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.