ಶ್ರೀಹರಿಕೋಟಾ: ಚಂದ್ರನ ಅಂಗಳಕ್ಕೆ ಲಗ್ಗೆ ಹಾಕುವ ಭಾರತೀಯರ ಕನಸು ಪರಿಪೂರ್ಣ ನನಸಾಗಲು ಇನ್ನೊಂದೇ ಗೇಣು ಬಾಕಿ. ಮಹತ್ವಾಕಾಂಕ್ಷೆಯ ‘ಚಂದ್ರಯಾನ -3″ ಉಪಗ್ರಹವನ್ನು ಹೊತ್ತ ಮಾರ್ಕ್ 3 ನೌಕೆ ನಭಕ್ಕೆ ಹಾರಿದೆ.
ಭಾರತದ ಅಂತರಿಕ್ಷ ಶಕ್ತಿಕೇಂದ್ರವಾಗಿರುವ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಚಂದ್ರಯಾನ ಆರಂಭವಾಗಿದೆ. ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಉಪಗ್ರಹವನ್ನು ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಇಳಿಸುವ 6 ವಾರಗಳ ಮಿಷನ್ ಯಶಸ್ಸಿನ ಹಾದಿಯಲ್ಲಿದೆ.
ಇಸ್ರೋದ ಮಹಾತ್ವಕಾಂಕ್ಷೆಯ ಚಂದ್ರಯಾನ -3 ಶಶಾಂಕ ದಕ್ಷಿಣ ಧ್ರುವದತ್ತ ಪ್ರಯಾಣ ಬೆಳೆಸಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಉಡ್ಡಯನ ಯಶಸ್ವಿಯಾಗುತ್ತಿದ್ದಂತೆಯೇ ಇಸ್ರೋ ತಂಡ ಸಂಭ್ರಮಿಸಿತು. ಭಾರತೀಯರೂ ಸಂತಸದ ನಗೆ ಬೀರಿದ್ದಾರೆ.
India today embarked on its historic space journey with the successful launch of Chandrayaan-3.
My heartfelt congratulations to the @ISRO scientists whose tireless pursuit has today propelled India on the path of scripting a remarkable space odyssey for generations to cherish. pic.twitter.com/YPZCHPbZoq
— Amit Shah (Modi Ka Parivar) (@AmitShah) July 14, 2023
ಚಂದ್ರಯಾನ-3ರ ಹೈಲೈಟ್ಸ್ ಹೀಗಿದೆ:
ಚಂದ್ರಯಾನ-3 ಗಗನನೌಕೆಯು ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಹೊತ್ತೊಯ್ದಿದೆ.
ಸುಮಾರು ತೂಕ 3,926 ಕೆಜಿ ತೂಕದ ಗಗನನೌಕೆ
ಪ್ರೊಪಲ್ಷನ್ ಮಾಡ್ಯೂಲ್ ತೂಕವು 2,148 ಕೆಜಿ,
ಲ್ಯಾಂಡರ್ (ರೋವರ್ ಸಹಿತ) 1,752 ಕೆಜಿ,
ರೋವರ್ 26 ಕೆಜಿ
ಈ ಪ್ರೊಪಲ್ಷನ್ ಮಾಡ್ಯೂಲ್ 3 ರಿಂದ 6 ತಿಂಗಳ ಜೀವಿತಾವಧಿ ಹೊಂದಿದೆ.
ಲ್ಯಾಂಡರ್, ರೋವರ್ ಜೀವಿತಾವಧಿ 1 ಚಂದ್ರನ ದಿನ ಅಂದರೆ 14 ಭೂಮಿ ದಿನಗಳು.
ಚಂದ್ರನ ಹಗಲಿನಲ್ಲಿ ಇದು ಚಾರ್ಜ್ ಆಗಲಿದೆ
ಈ ನೌಕೆ ಚಂದ್ರನಲ್ಲಿ ತಲುಪಲು 42 ದಿನಗಳು ಬೇಕು
ಆಗಸ್ಟ್ 23 ಅಥವಾ 24ರಂದು ಚಂದ್ರನಲ್ಲಿ ಇಳಿಯುವ ನಿರೀಕ್ಷೆ.
























































ಈ ಪ್ರೊಪಲ್ಷನ್ ಮಾಡ್ಯೂಲ್ 3 ರಿಂದ 6 ತಿಂಗಳ ಜೀವಿತಾವಧಿ ಹೊಂದಿದೆ.