ಬೆಂಗಳೂರು-: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿವಾದದಲ್ಲಿ ಪೊಲೀಸರು ಹುಡುಕಾಡುತ್ತಿದ್ದ ಪತ್ರಕರ್ತರಿಬ್ಬರು ಬಂಧನದಿಂದ ಪಾರಾಗಿದ್ದಾರೆ. ಪತ್ರಕರ್ತರಾದ ನರೇಶ್ ಹಾಗೂ ಶ್ರವಣ್‌ಗೆ ಬೆಙಗಳೂರಿನ 91ನೇ ಸಿಸಿಎಚ್ ಕೋರ್ಟ್ ಇಂದು ಜಾಮೀನು ಪ್ರಕಟಿಸಿದೆ.
ಈ ವಿವಾದಿತ ಸಿಡಿ ಅನಾವರಣ ವಿಚಾದಲ್ಲಿ ರಮಶ್ ಜಾರಕಿಹೊಳಿ ಅವರು ನೀಡಿದ್ದ ದೂರಿನ ಪ್ರಕರಣದಲ್ಲಿ ಪೊಲೀಸರು ನರೇಶ್ ಹಾಗೂ ಶ್ರವಣ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದಾಗಲೇ ಬಂಧನ ಭೀತಿ ಹಿನ್ನೆಲೆಯಲ್ಲಿ ನರೇಶ್ ಹಾಗೂ ಶ್ರವಣ್ ಕೋರ್ಟ್ ಮೊರೆ ಹೋಗಿದ್ದು, ಇವರು ಸಲ್ಲಿಸಿದ್ದ ಮನವಿಯನ್ನು ಕೋರ್ಟ ಪುರಸ್ಕರಿಸಿದೆ.



















































