ಬೆಂಗಳೂರು: ಸಾರಿಗೆ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಮೂಲಕ ಜನಪ್ರಿಯ ನಿಗಮವೆನಿಸಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಸಮಾಜಿಕ ಸ್ವಾಸ್ಥ್ಯ ವಿಚಾರದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಬೆಂಗಳೂರಿನಲ್ಲಿರುವ KSRTC ಕೇಂದ್ರ ಸ್ಥಾನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮ ಗಮನಸೆಳೆಯಿತು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ನವೀನ್ ಭಟ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ CERVICAL ಕ್ಯಾನ್ಸರ್ ಹೆಚ್ಚಾಗಿ ವರದಿಯಾಗುತ್ತಿದ್ದು, ಇಂತಹ ಖಾಯಿಲೆಗಳನ್ನು ಪ್ರಥಮ ಅಥವ ದ್ವಿತೀಯ ಹಂತದಲ್ಲಿಯೇ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಕ್ಯಾನ್ಸರ್ ಗುಣಪಡಿಸ ಬಹುದಾಗಿರುವುದರಿಂದ ಮಹಿಳೆಯರು ಯಾವುದೇ ಮುಜಗರಕ್ಕೆ ಒಳಗಾಗದೇ ಪ್ರತಿ ವರ್ಷಕೊಮ್ಮೆ PAP SMEAR TEST ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು..
HCG ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥರಾದ ಮನಿಷಾ ಕುಮಾರ್, ಮಾತನಾಡಿ, CERVICAL ಕ್ಯಾನ್ಸರ್ ಖಾಯಿಲೆಯು ಪ್ರತಿ 09 ಜನರಲ್ಲಿ ಒಬ್ಬರಿಗೆ ಹರಡುತ್ತಿದ್ದು, ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹೆಚ್ಚಿ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು. ಕ್ಯಾನ್ಸರ್ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮವು ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಅಗತ್ಯವಿದ್ದಾಗ ಸಕಾಲಿಕ ವೈದ್ಯಕೀಯ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ನಿರ್ದೇಶಕರು (ಸಿಬ್ಬಂದಿ &ಜಾಗೃತ) ಡಾ. ನಂದಿನಿದೇವಿ ಕೆ, HCG ಆಸ್ಪತ್ರೆಯ ಡಾ. ಮಹೇಶ್ ಬಂಡೆಮೇಗಲ್, Surgical Oncologist, HCG ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.