ಬೆಂಗಳೂರು: ಸಿದ್ದರಾಮಯ್ಯ ಸಂಪುಟ ಇಂದು ವಿಸ್ತರಣೆಯಾಗಲಿದೆ. 24 ಮಂದಿ ಮಂತ್ರಿಗಳಾಗಿ ಇಂದು ರಾಜಭವನದಲ್ಲಿ ಸಚಿವರಾಗಿ ಪ್ತಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪೂರ್ಣ ಪ್ತಮಾಣದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಸಚಿವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ರಾಜಭವನದ ಸುತ್ತಮುತ್ತ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಬದಲಿಸಲಾಗಿದರ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
- ಕೆ.ಆರ್.ವೃತ್ತದಿಂದ ಗೋಪಾಲಗೌಡ ವೃತ್ತದವರೆಗೆ ನೃಪತುಂಗ ರಸ್ತೆ / ಕಬ್ಬನ್ಪಾರ್ಕ್ ಒಳಗೆ
- ಬಾಳೇಕುಂದ್ರಿ ವೃತ್ತ-ಕಾಫಿ ಬೋರ್ಡ್ / ತಿಮ್ಮಯ್ಯ ವೃತ್ತದ ಕಡೆಗೆ
- ಪೊಲೀಸ್ ತಿಮ್ಮಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ
- ಕ್ವೀನ್ಸ್ ಸರ್ಕಲ್, ಸಿದ್ದಲಿಂಗಯ್ಯ ವೃತ್ತದ ಕಡೆಗೆ
ಈ ಮಾರ್ಗಗಳಲ್ಲಿ ವಾಹನಗಳ ಸಂಚಾರ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ.



























































