ಉಡುಪಿ: ಸರ್ಕಾರದ ಅನುದಾನ ಇಲ್ಲದೇ ಇದ್ದರೂ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾಮಗಾರಿ ಕಮಾಲ್ ಪ್ರದರ್ಶಿಸಿದ್ದಾರೆ.
ಇಡೀ ರಾಜ್ಯದಲ್ಲಿ ಎರಡೂ ಪಕ್ಷದಲ್ಲಿ ರಾಜಕೀಯ ತಲ್ಲಣವಾಗುತ್ತಿದ್ದರೂ ಈ ಬೈಂದೂರು ಶಾಸಕ ಗಂಟಿಹೊಳೆ ಮಾತ್ರ ತನ್ನ ಕ್ಷೇತ್ರಕ್ಕೆ ಬೇರೆ ಬೇರೆ ಖಾಸಗಿ ಸಂಸ್ಥೆಗಳ ಮುಕಾಂತರ ಒಂದಲ್ಲಾ ಒಂದು ಕೆಲಸ ಮಾಡುತ್ತಾ ಸುದ್ದಿಯಲಿರುತ್ತಾರೆ. ಶಾಸಕರು ‘ಸಮೃದ್ಧ ಬೈಂದೂರು’ ಪರಿಕಲ್ಪನೆಯಲ್ಲಿ ಖಾಸಗಿ ಸಂಸ್ಥೆಗಳಿಂದ ಮತ್ತು ದೇಶ ವಿದೇಶಗಳಲ್ಲಿರುವ ಉದ್ಯಮಿ & ದಾನಿಗಳನ್ನು ಭೇಟಿಯಾಗಿ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಸಂಗ್ರಹಿಸಿದ್ದಾರೆ.
ಶಾಸಕ ಗಂಟಿಹೊಳೆಯವರು 300 ಟ್ರೀಸ್ ಎನ್ನುವ ಯೋಜನೆಯಡಿಯಲ್ಲಿ 300 ಸರ್ಕಾರಿ ಶಾಲೆ ಅಭಿವೃದ್ಧಿ ಪಡೆಸುವ ಗುರಿ ಇಟ್ಟುಕೊಂಡು ಹಳ್ಳಿ ಪ್ರದೇಶದ ಶಾಲೆಗಳನ್ನು ದಾನಿಗಳ ಮುಖಾಂತರ ಅಭಿವೃದ್ಧಿಗೆ ಕಾರಣರಾಗಿದ್ದಾರೆ.
ಬೈಂದೂರು ಜನರು ಎಂದೂ ಕಾಣದ ಡಯಲಿಸಿಸ್ ಸೆಂಟರ್, ಸುಸರ್ಜಿತ ಆಸ್ಪತ್ರೆ, ICU, ಎಮರ್ಜೆನ್ಸಿ ಚಿಕಿತ್ಸೆ, ಬೆನ್ನು ಹುರಿ ಸಮಸ್ಯೆ ನಿಗ್ರಹ ಕೇಂದ್ರ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಸಫಲರಾಗಿದ್ದಾರೆ.
ಇದೀಗ ಬೈಂದೂರಿನ ಗಂಗನಾಡು ಎಂಬ ಕುಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಖಾಸಗಿ ಸಂಸ್ಥೆ ಮುಖಾಂತರ 2 ಕೊಠಡಿಯಯ ಅಭಿವೃದ್ಧಿ ಕೆಲಸಕ್ಕಾಗಿ ಶುಕ್ರವಾರ ಗುದ್ದಲಿ ಪೂಜೆ ನೆಡೆಸಿ ಕಾಮಗಾರಿಗೆ ಚಾಲನೆ ನೀಡಿದರು.