ಬೆಂಗಳೂರು: ತಾವು ಸಿಂ ಆಗಲು ಕಾರಣಕರ್ತರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಕಲ್ಪಿಸಿರುವ ಬಸವರಾಜ್ ಬೊಮ್ಮಾಯಿ ನಡೆ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇದೇ ಹೊತ್ತಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರೂ ತಮಗೆ ಒದಗಿಸಲುದ್ದೇಶಿಸಿರುವ ಸ್ಥಾನಮಾನವನ್ನು ತಿರಸ್ಕರಿಸಿದ್ದಾರೆ. ಇತರ ನಿಕಟಪೂರ್ವ ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಸ್ಥಾನಮಾನ ತಮಗೆ ಬೇಡ ಎಂದು ಬಿಎಸ್‌ವೈ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಯಡಿಯೂರಪ್ಪ ಅವರ ಈ ತೀರ್ಮಾನವನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಬೊಮ್ಮಾಯಿರವರ ಓಲೈಕೆ ಆದೇಶ ತಿರಸ್ಕರಿಸುವ ಮೂಲಕ ಬಿಎಸ್‌ವೈ ಅವರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರೂ ಆದ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಬಣ್ಣಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ರಮೇಶ್ ಬಾಬು, ಸಿಎಂ ಬಸವರಾಜ ಬೊಮ್ಮಾಯಿ ಓಲೈಕೆಗಾಗಿ ಯಡಿಯೂರಪ್ಪ ಅವರಿಗೆ ಸಾಂವಿಧಾನಿಕ ಸ್ಥಾನ ಇಲ್ಲದೆ ಸಂಪುಟ ದರ್ಜೆ ಸ್ಥಾನ ನೀಡಿದ ಆದೇಶವು ನಿಯಮ ಬಾಹಿರ, ಕೆಟ್ಟ ಪರಂಪರೆಯಾಗಿದೆ ಎಂದು ಹೇಳಿದ್ದಾರೆ. ಬೊಮ್ಮಾಯಿರವರ ಈ ಓಲೈಕೆ ಆದೇಶವನ್ನು ತಿರಸ್ಕರಿಸಿ, ಉತ್ತಮ ಪರಂಪರೆಗೆ ಯಡಿಯೂರಪ್ಪ ಮುನ್ನಡಿಯ ಮೆರಗು ನೀಡಿದ್ದಾರೆ ಎಂದಿರುವ ಅವರು, ಮುಖ್ಯಮಂತ್ರಿಗಳೇ ಅವಕಾಶ ರಾಜಕಾರಣ ಮತ್ತು ಅಧಿಕಾರಕ್ಕಾಗಿ ನಿಯಮ ಉಲ್ಲಂಘನೆ ಬೇಡ ಎಂದು ಸಲಹೆ ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಓಲೈಕೆಗಾಗಿ ಶ್ರೀ ಯಡಿಯೂರಪ್ಪ ಅವರಿಗೆ ಸಾಂವಿಧಾನಿಕ ಸ್ಥಾನ ಇಲ್ಲದೆ ಸಂಪುಟ ದರ್ಜೆ ಸ್ಥಾನ ನೀಡಿದ ಆದೇಶ ನಿಯಮ ಬಾಹಿರ ಕೆಟ್ಟ ಪರಂಪರೆ
ಬೊಮ್ಮಾಯಿರವರ ಓಲೈಕೆ ಆದೇಶ ತಿರಸ್ಕರಿಸಿ ಉತ್ತಮ ಪರಂಪರೆಗೆ ಶ್ರೀ ಯಡಿಯೂರಪ್ಪ ಮುನ್ನಡಿಯ ಮೆರಗು ನೀಡಿದ್ದಾರೆ
ಮುಖ್ಯಮಂತ್ರಿಗಳೇ ಅವಕಾಶ ರಾಜಕಾರಣ ಮತ್ತು ಅಧಿಕಾರಕ್ಕಾಗಿ ನಿಯಮ ಉಲ್ಲಂಘನೆ ಬೇಡ pic.twitter.com/hm01lrNOJx— Ramesh Babu (@rameshbabuexmlc) August 8, 2021