ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಾಗಿರುವ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ. ಬಿಎಸ್ವೈ ಅವರನ್ನು ಹಣಿಯಲು ಯಾರೋ ಮಾಡಿರುವ ತಂತ್ರವಿದು ಎಂದು ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ವಿರುದ್ಧ ದೂರು ದಾಖಲಾಗಿರುವ ವಿಚಾರ ಗೊತ್ತಾಗಿದೆ. ಅವರನ್ನು ಬಹಳ ಹಿಂದಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಅವರ ಸ್ವಭಾವದ ಬಗ್ಗೆ ನನಗೆ ಗೊತ್ತಿದೆ ಎಂದು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದರು. ಯಡಿಯೂರಪ್ಪ ವಿರುದ್ದದ ದೂರು ಒಂದು ಪಡ್ಕಂತ್ರ ಅಷ್ಟೆ ಹೊರತಾಗಿ ಮತ್ತೇನು ಅಲ್ಲ ಎಂದ ಈಶ್ವರಪ್ಪ, ಯಡಿಯೂರಪ್ಪನವರು ಆರೋಪಮುಕ್ತರಾಗಿ ಹೊರಗೆ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.






















































