ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು 80ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಜನ್ಮ ದಿನದ ಸಂದರ್ಭದಲ್ಲಿ ಬಿಎಸ್‌ವೈ ಅವರಿಗೆ ಶುಭಾಶಯಗಳ ಮಹಾಮಳೆಯಾಗುತ್ತಿದೆ.
ಜನ್ಮದಿನದ ಅಂಗವಾಗಿ ಅಭಿಮಾನಿಗಳು, ಆಪ್ತರು ಹಾಗೂ ಬೆಂಬಲಿಗರು ಬೃಹತ್ ಕೇಕ್ ಕತ್ತರಿಸಿ ಹಿರಿಯ ನಾಯಕನಿಗೆ ಶುಭ ಹಾರೈಸಿದರು. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ಬೈರತಿ ಬಸವರಾಜ್, ಬಿ.ವೈ.ವಿಜಯೇಂದ್ರ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನ ಸಂಜಯನಗರದ ರಾಧಕಷ್ಣ ದೇವಸ್ಥನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಿಜೆಪಿ ಧುರೀಣರನೇಕರು ಬಿಎಸ್‌ವೈ ಜೊತೆಗಿದ್ದರು.
#BSYediyurappa #BSY ಜನ್ಮದಿನ ಸಡಗರ.. ಬೆಂಗಳೂರಿನ ಸಂಜಯನಗರ ರಾಧಕಷ್ಣ ದೇವಸ್ಥಾನದಲ್ಲಿ ಮಾಜಿ ಸಿಎಂ #ಯಡಿಯೂರಪ್ಪ ಕೈಂಕರ್ಯ. #happybirthdaybsy@BSYBJP pic.twitter.com/gDyyseU3gG
— Alvin Mendonca (@alvinviews) February 27, 2022
ಹುಟ್ಟು ಹಬ್ಬ ಸಂಭ್ರಮದಲ್ಲಿರುವ ಯಡಿಯೂರಪ್ಪ ಅವರಿಗೆ ಬಿಜೆಪಿ ನಾಯಕರು ಶುಭ ಹಾರೈಸಿದ್ದಾರೆ. ನಮ್ಮ ರಾಜ್ಯ ಮತ್ತು ಪಕ್ಷಕ್ಕಾಗಿ ಹಗಲಿರುಳು ದುಡಿದು ಅಪಾರ ಕೊಡುಗೆ ನೀಡಿದ ಕೀರ್ತಿ ನಿಮ್ಮದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹಾಡಿ ಹೊಗಳಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಹಾಗೂ ನಮ್ಮ ಪಕ್ಷದ ಹಿರಿಯರಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು.
ನಮ್ಮ ರಾಜ್ಯ ಮತ್ತು ಪಕ್ಷಕ್ಕಾಗಿ ಹಗಲಿರುಳು ದುಡಿದು ಅಪಾರ ಕೊಡುಗೆ ನೀಡಿದ ಕೀರ್ತಿ ನಿಮ್ಮದು.
ಗುರು ದತ್ತಾತ್ರೇಯರು ನಿಮಗೆ ದೀರ್ಘಾಯಸ್ಸು ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. pic.twitter.com/nZv6hMygZJ
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) February 27, 2022