ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸರ್ಜರಿ ಕೊಡುಗೆ ಸಿಕ್ಕಿದೆ.
ವರ್ತುಲ ರಸ್ತೆ ಅಭಿವೃದ್ದಿ, ಇಂದಿರಾ ಕ್ಯಾಂಟೀನ್‌ಗೆ ಮರುಜೀವ, ಮೇಲ್ಸೇತುವೆಗಳ ನಿರ್ಮಾಣ, ಕುಡಿಯುವ ನೀರು ಯೋಜನೆಯ ಉನ್ನತೀಕರಣ, ರಸ್ತೆಗಳಿಗೆ ವೈಟ್ ಟ್ಯಾಪಿಂಗ್, ಹೈಡೆನ್ಸೆಟಿ ಕಾರಿಡಾರ್ ವ್ಯವಸ್ಥೆ ಹೀಗೆ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬೆಂಗಳೂರು ಪಾಲಿನ ಬಗ್ಗೆ ಇಲ್ಲಿದೆ ಹೈಲೈಟ್ಸ್:
ಬ್ರಾಂಡ್ ಬೆಂಗಳೂರು ಪರಿಕಲ್ಪನೆ ಜಾರಿ. ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಭಳಕೆ, ಸಾರ್ವಜನಿಕರ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ನೀರಿನ ಭದ್ರತೆ & ಪ್ರವಾಹ ನಿರ್ವಹಣೆ- ಈ 9 ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ
ಇಂದಿರಾ ಕ್ಯಾಂಟೀನ್‌ಗಳಿಗೆ ಪುರುಜ್ಜೀವ. ನವೀಕರಣ, ದುರಸ್ತಿ, ಕೆಲ ಹೊಸ ಕ್ಯಾಂಟೀನ್ ನಿರ್ಮಾಣಕ್ಕಾಗಿ 100 ಕೋಟಿ ರೂಪಾಯಿ.
ಬೈಯಪ್ಪನಹಳ್ಳಿ ಸರ್.ಎಂ.ವಿ. ರೈಲ್ವೇ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸಲು ಹೊಸ ಮೇಲ್ಸೇತುವೆ ನಿರ್ಮಾಣ.
ಮೆಟ್ರೋದಿಂದ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸಲು 263 ಕೋಟಿ ರೂ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ.
ಸಿಲಿಕಾನ್ ಸಿಟಿಯಲ್ಲಿ ಹೊಸದಾಗಿ 1,411 ಕೋಟಿ ರೂವೆಚ್ಚದಲ್ಲಿ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ.
ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ 100ಕಿ.ಮೀ. ಹೊಸ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ.
83 ಕಿ.ಮೀ. ರಸ್ತೆ ಹೈಡೆನ್ಸೆಟಿ ಕಾರಿಡಾರ್ ಗಳಾಗಿ ಪರಿವರ್ತನೆ. ಇದಕ್ಕಾಗಿ 273 ಕೋಟಿ ರೂಪಾಯಿ ನಿಗದಿ.
ಹೆಬ್ಬಾಳದಿಂದ ಸರ್ಜಾಪುರ ವರೆಗಿನ 37 ಕಿ.ಮೀ ಮೆಟ್ರೋ ಯೋಜನೆಯನ್ನು, 15 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ.
70 ಕಿ.ಮೀ. ಇರುವ ಮೆಟ್ರೋವನ್ನು ಮುಂದಿನ ಮೂರು ವರ್ಷಗಳಲ್ಲಿ 176 ಕಿ.ಮೀ.ಗೆ ವಿಸ್ತರಣೆ
ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದಲೇ ಸಾವಿರ ಕೋಟಿ ಅನುದಾನ
ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಜಾಗವನ್ನು 256 ಉದ್ಯಾನವನವಾಗಿ ಪರಿವರ್ತನೆ
1,250 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಗಳ ತ್ಯಾಜ್ಯ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಕಾಮಗಾರಿ
ಘನ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ 100 ಕೋಟಿ ರೂಪಾಯಿ ಅನುದಾನ
256 ಎಕರೆ ಭೂಮಿ ಉದ್ಯಾನವನವಾಗಿ ಪರಿವರ್ತನೆ.