ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ಬೊಮ್ಮಾಯಿ, ಶ್ರೀರಾಮುಲು ಮೇಲೂ ತನಿಖೆ ನಡೆಯಲಿ ಎಂದೂ ಮಾಜಿ ಶಾಸಕ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಅರಸು ಟರ್ಮಿನಲ್ ಹಗರಣ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷರೂ ಆದ ರಮೇಶ್ ಬಾಬು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ದೇವರಾಜ ಅರಸು ್ರಕ್ ಟರ್ಮಿನಲ್ ಹಗರಣ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಶ್ರೀರಾಮುಲು ಅವರು ಮೂಗಿನ ನೇರದಲ್ಲೇ ದೇವರಾಜ ಅರಸು ಟ್ರಕ್ ಟರ್ಮಿನಲ್ ಸಂಸ್ಥೆಯಲ್ಲಿ ಅಕ್ರಮ ನಡೆದಿದ್ದು ಇವರ ಮೇಲೂ ಸಿಐಡಿ ತನಿಖೆ ನಡೆಸಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದರು.
ಬೋಗಸ್ ದಾಖಲೆಗಳನ್ನು ಸಲ್ಲಿಸಿ ಹಣ ಪಡೆದುಕೊಂಡಿರುವ ಅಂಶ ಕೆಲವು ನಿರ್ದೇಶಕರ ಗಮನಕ್ಕೆ ಬಂದಿದೆ. ಯಾವ, ಯಾವ ಸಂಸ್ಥೆಗಳಿಗೆ ಹಣ ಪಾವತಿ ಆಗಿರುವುದು ಬೋಗಸ್ ಬಿಲ್ ಗಳನ್ನು ನೀಡಿ ಅಕ್ರಮ ಎಸಗಿರುವುದು ಸೇರಿದಂತೆ ಅನೇಕ ಅಕ್ರಮಗಳನ್ನು ನಿರ್ದೇಶಕ ಮಂಡಳಿ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಾಗೂ ಸಾರಿಗೆ ಸಚಿವರಾಗಿದ್ದ ಶ್ರೀರಾಮುಲು ಅವರ ಗಮನಕ್ಕೆ ತರಲಾಗಿತ್ತು ಎಂದು ಅವರು ತಿಳಿಸಿದರು.
ದೇವರಾಜ ಅರಸು ಟ್ರಕ್ ಟರ್ಮಿನಲ್ ನಡೆದಿರುವ ಅಕ್ರಮಗಳನ್ನು ಸಿಐಡಿ ತನಿಖೆ ನಡೆಸುತ್ತಿದ್ದು ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಶ್ರೀರಾಮುಲು ಅವರನ್ನು ಆರೋಪಿಗಳನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದರು..
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ನಲ್ಲಿ ಅನುಮಾನಿತರು ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಎಂಡಿ ಅವರ ಹೆಸರನ್ನು ಉಲ್ಲೇಖಿಸುತ್ತಾರೆ ಹೊರತು ಡಿ ಎಸ್ ವೀರಯ್ಯ ಅವರ ಹೆಸರು ಸಹ ಇಲ್ಲ. ಪತ್ರ ವ್ಯವಹಾರವಾಗಿದೆ ಎಂದರೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನಕ್ಕೆ ಬರದೆ ಇವುಗಳು ನಡೆದಿರುವುದಿಲ್ಲ. ಆದ ಕಾರಣಕ್ಕೆ ಇವರನ್ನೂ ಸಹ ಆರೊಪಿಗಳನ್ನಾಗಿ ಮಾಡಬೇಕು ಎಂದು ಕಾನೂನುತಜ್ಞರೂ ಆದ ರಮೇಶ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.
50 ಕೋಟಿ ದುರುಪಯೋಗವಾಗಿದೆ ಎಂದು ಎಂಡಿ ಅವರು ಲಿಖಿತವಾಗಿ ದೂರು ನೀಡಿದ ನಂತರವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಗಮನಕ್ಕೆ ಬಂದರು ಏಕೆ ಸುಮ್ನಿದ್ದರು. ಗಮನಕ್ಕೆ ಬರದೇ ಇದ್ದಿದ್ದರೇ ಬೇರೆ ವಿಚಾರವಾಗಗುತ್ತಿತ್ತು ಎಂದ ರಮೇಶ್ ಬಾಬು, ಹಗರಣದ ಕುರಿತು ಮಾತನಾಡಬೇಕಾಗುತ್ತದೆ ಎಂದು ಸಾಮಾನ್ಯ ಸಭೆಯನ್ನು ಮುಂದಕ್ಕೆ ಹಾಕಿ ಎಂದು ನಿಗಮದ ಮಾಜಿ ಅಧ್ಯಕ್ಷರಾದ ಡಿಎಸ್ ವೀರಯ್ಯ ಅವರು ಸಭೆಯನ್ನು ಮುಂದಕ್ಕೆ ಹಾಕುತ್ತಲೇ ಬಂದಿದ್ದರು ಎಂದು ದೂರಿದರು.