ಬಿಜೆಪಿ ಯುವಮೋರ್ಚಾದಿಂದ ಕೋವಿಡ್ ಸಹಾಯವಾಣಿ, ಕರೋನಾ ವಾರ್ ರೂಂ ಕಾರ್ಯಾರಂಭ.. ಸಹಾಯವಾಣಿ ನಂ: 08296723451 ಕರೋನಾ ವಾರ್ ರೂಂ ನಂ: 918147474841, 918105465006
ಬೆಂಗಳೂರು: ಕರೋನ ಸಾಂಕ್ರಾಮಿಕ ರೋಗವು ದೇಶವ್ಯಾಪಿ ವೇಗವಾಗಿ ಹರಡುತ್ತಿದ್ದು, ಕರೋನ ಸಂಬಂಧಿತ ಸಮಸ್ಯೆಗಳು ಮತ್ತು ಪ್ರಶ್ನೆಗಳಿಗೆ ದೇಶದ ನಾಗರಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕರ್ನಾಟಕದ ವತಿಯಿಂದ ಪ್ರಾರಂಭಿಸಿರುವ ಸಹಾಯವಾಣಿಗೆ (082967 23451) ಹಾಗೂ ಬೆಂಗಳೂರು ಕರೋನಾ ವಾರ್ ರೂಂ ಸಹಾಯವಾಣಿಗೆ (918147474841 / 918105465006) ಇಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ. ಟಿ.ರವಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ, ಕೋಶಾಧ್ಯಕ್ಷ ಅನಿಲ್ ಶೆಟ್ಟಿ, ಕಾರ್ಯದರ್ಶಿ ಅರವಿಂದ ರೆಡ್ಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಜಗದೀಶ್ ಚಂದ್ರ, ಪ್ರಶಾಂತ್ ಕೆ ವಿ, ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷ ಅಭಿಲಾಶ್, ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಪುನೀತ್, ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷ ಪ್ರಶಾಂತ್, ಬೆಂಗಳೂರು ಉತ್ತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ದರ್ಶನ್ ಅವರು ಉಪಸ್ಥಿತರಿದ್ದರು.
ಏಪ್ರಿಲ್ 27 ರಿಂದ ರಾಜ್ಯದಾದ್ಯಂತ ಪ್ಲಾಸ್ಮಾ ದೇಣಿಗೆ ಅಭಿಯಾನವನ್ನು ಯುವಮೋರ್ಚಾ ಪ್ರಾರಂಭಿಸಲಿದ್ದು, ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕರೋನಾ ವಾಕ್ಸಿನೇಷನ್ ನೀಡಲು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಯುವಮೋರ್ಚಾ ಧನ್ಯವಾದಗಳನ್ನು ಸಮರ್ಪಿಸಿದೆ.
ಕರ್ನಾಟಕದಾದ್ಯಂತ ಎಲ್ಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಬಯಸುವವರಿಗೆ ಯುವಮೋರ್ಚಾದ ವತಿಯಿಂದ ಸಹಾಯ ಮಾಡಲು ಉದ್ದೇಶಿಸಿದೆ ಎಂದು ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಹೆಗಡೆ ಅವರು ತಿಳಿಸಿದ್ದಾರೆ.