ಬೆಂಗಳೂರು: ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ವೈಖರಿ ವಿರುದ್ದ ಸಿಡಿದೇಳುತ್ತಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಎದಿರೇಟು ನೀಡಿದೆ. ‘ಅಂಗಳ ಅಳೆಯಲು ಅಸಾಧ್ಯರಾದವರಿಗೆ ಆಕಾಶ ಅಳೆಯುವ ತೆವಲು’ ಎಂದು ಸಿದ್ದರಾಮಯ್ಯ ಅವರ ಮನಸ್ಥಿತಿ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸಲ್ಲಿಸಿದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ ಮೇಲೂ ಸಿದ್ದರಾಮಯ್ಯ ಅವರಿಗೆ ಬುದ್ಧಿ ಬಂದಿಲ್ಲ ಟೀಕಿಸಿದೆ. ಲಸಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬುದು ಸಿದ್ದರಾಮಯ್ಯ ಅವರ ಬೂಟಾಟಿಕೆಯ ಪರಮಾವಧಿಯಲ್ಲದೆ ಮತ್ತೇನಲ್ಲ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ಅಂಗಳ ಅಳೆಯಲು ಅಸಾಧ್ಯರಾದವರಿಗೆ ಆಕಾಶ ಅಳೆಯುವ ತೆವಲು. ಕಾಂಗ್ರೆಸ್ ಸಲ್ಲಿಸಿದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ ಮೇಲೂ @siddaramaiah ಅವರಿಗೆ ಬುದ್ಧಿ ಬಂದಿಲ್ಲ.
ಲಸಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬುದು ಸಿದ್ದರಾಮಯ್ಯ ಅವರ ಬೂಟಾಟಿಕೆಯ ಪರಮಾವಧಿಯಲ್ಲದೆ ಮತ್ತೇನಲ್ಲ.
2/4#ಬುರುಡೆಸಿದ್ದರಾಮಯ್ಯ pic.twitter.com/wczlimb91y
— BJP Karnataka (@BJP4Karnataka) May 24, 2021
ಬಾದಾಮಿ ಶಾಸಕ ಸಿದ್ದರಾಮಯ್ಯ ಕನಸಿನಲ್ಲಿ ಹೊಟ್ಟೆ ತುಂಬ ತಿಂದು ಎಚ್ಚರವಾದ ಮೇಲೆ ತೇಗುವ ವಿಚಿತ್ರ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಲಸಿಕೆ ನಿಧಿ ಸಂಗ್ರಹ ನಾಟಕವೂ ಹಾಗೆಯೇ ಆಗಿದೆ. ಇಲ್ಲದೇ ಇರುವ ದುಡ್ಡನ್ನು ಕೊಡುತ್ತೇವೆ ಎಂದು ಬಡಾಯಿ ಕೊಚ್ಚಿ ಈಗ ಸರ್ಕಾರದ ಬಳಿ ಅನುದಾನ ಬೇಡುತ್ತಿರುವುದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಬಾದಾಮಿ ಶಾಸಕ ಸಿದ್ದರಾಮಯ್ಯ ಕನಸಿನಲ್ಲಿ ಹೊಟ್ಟೆ ತುಂಬ ತಿಂದು ಎಚ್ಚರವಾದ ಮೇಲೆ ತೇಗುವ ವಿಚಿತ್ರ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಲಸಿಕೆ ನಿಧಿ ಸಂಗ್ರಹ ನಾಟಕವೂ ಹಾಗೆಯೇ ಆಗಿದೆ. ಇಲ್ಲದೇ ಇರುವ ದುಡ್ಡನ್ನು ಕೊಡುತ್ತೇವೆ ಎಂದು ಬಡಾಯಿ ಕೊಚ್ಚಿ ಈಗ ಸರ್ಕಾರದ ಬಳಿ ಅನುದಾನ ಬೇಡುತ್ತಿರುವುದೇಕೆ?
— BJP Karnataka (@BJP4Karnataka) May 24, 2021