ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ತಮ್ಮ ಪುತ್ರನನ್ನು ಸಂಸತ್ತಿಗೆ ಕಳುಹಿಸಲೇಬೇಕೆಂದು ಹತದಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಸೋಲಿನ ಆಘಾತದಿಂದ ಇನ್ನೂ ಹೊರಬಂದಿಲ್ಲವೇ?
ಪುತ್ರನ ಹೀನಾಯ ಸೋಲಿನ ಶಾಕ್ ನಿಂದ ಇನ್ನೂ ಸಹ ಸಚಿವೆ @laxmi_hebbalkar ಅವರು ಹೊರಬಂದಿಲ್ಲ ಎಂದೆನಿಸುತ್ತದೆ.
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿಯನ್ನು ಹಳ್ಳ ಹಿಡಿಸಿರುವ ಸಚಿವರು, ತಮ್ಮ ಉಸ್ತುವಾರಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕಂಡು ಕೇಳರಿಯದಂತಹ ಪ್ರವಾಹ ಉಂಟಾದರೂ ಉಸ್ತುವಾರಿ ಸಚಿವರು… pic.twitter.com/QYek69xjgN
— BJP Karnataka (@BJP4Karnataka) July 10, 2024
ಈ ಬಗ್ಗೆ ಸಾಮಾಜಿಕ ಜಾಲತಾಣ ‘X’ನಲ್ಲಿ ಪ್ರತಿಪಕ್ಷ ಬಿಜೆಪಿ ಮಾಡಿರುವ ಪೋಸ್ಟ್ ಗಮನಸೆಳೆದಿದೆ. ಉಡುಪಿ ಜಿಲ್ಲೆಯಲ್ಲಿನ ಮಳೆ ಅವಾಂತರ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿರುವ ಬಿಜೆಪಿ, ‘ಪುತ್ರನ ಹೀನಾಯ ಸೋಲಿನ ಶಾಕ್ ನಿಂದ ಇನ್ನೂ ಸಹ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೊರಬಂದಿಲ್ಲ ಎಂದೆನಿಸುತ್ತದೆ ಎಂದು ಹೇಳಿದೆ.
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿಯನ್ನು ಹಳ್ಳ ಹಿಡಿಸಿರುವ ಸಚಿವರು, ತಮ್ಮ ಉಸ್ತುವಾರಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಂಡು ಕೇಳರಿಯದಂತಹ ಪ್ರವಾಹ ಉಂಟಾದರೂ ಉಸ್ತುವಾರಿ ಸಚಿವರು ಮಾತ್ರ ನಾಟ್ ರೀಚೆಬಲ್’ ಎಂದು ಬಿಜೆಪಿ ದೂರಿದೆ.
ಕೂಡಲೇ ಸಂಬಂಧಪಟ್ಟ ಉಸ್ತುವಾರಿ ಸಚಿವರು, ಪ್ರವಾಹ ನಿರತ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡುವಂತೆ ಆದೇಶ ನೀಡಿ, ಈ ಮೂಲಕ ಅಲ್ಪಸ್ವಲ್ಪವಾದರೂ ಜನೋಪಯೋಗಿ ಕೆಲಸ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಸ ಒತ್ತಾಯಿಸಿರುವ ವೈಖರಿಯೂ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.