ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ಪ್ರದೇಶ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಇಷ್ಟು ದಿನ ಯಾವುದೇ ಬಿಜೆಪಿ ನಾಯಕರನ್ನ ಎಲ್ಲಿದ್ದೀರಿ ಎಂದು ಕೇಳಿದರೆ ‘ದಿಲ್ಲಿ ದಿಲ್ಲಿ ದಿಲ್ಲಿ’ ಎನ್ನುತ್ತಿದ್ದರು. ಈಗ ಖಾತೆ ಆಸೆಗಾಗಿ, ಸಿಎಂ ಮನೆ ಮುಂದೆ ನಿಂತು ‘ಇಲ್ಲಿ ಇಲ್ಲಿ ಇಲ್ಲಿ’ ಎನ್ನುತ್ತಿದ್ದಾರೆ. ನೆರೆಯಿಂದ ನೊಂದ ರಾಜ್ಯದ ಜನರು ಮಾತ್ರ ಸರ್ಕಾರವನ್ನು ‘ಎಲ್ಲಿ ಎಲ್ಲಿ ಎಲ್ಲಿ’ ಎಂದು ಕೇಳುತ್ತಿದ್ದಾರೆ ಎಂದು ಪರಿಸ್ಥಿತಿಯತ್ತ ಬೊಟ್ಟು ಮಾಡಿದೆ.
ಮಳೆ ಕಡಿಮೆಯಾದರೂ ನೆರೆ ಕಡಿಮೆಯಾಗದೆ ಜನ ತೀವ್ರ ಸಂಕಷ್ಟದಲ್ಲಿದ್ದಾರೆ, ಸಂತ್ರಸ್ತರತ್ತ ಒಬ್ಬನೇ ಒಬ್ಬ ಸರ್ಕಾರದ ಪ್ರತಿನಿಧಿಯೂ ಹೋಗುತ್ತಿಲ್ಲ,
ಈ ಹೊತ್ತಿನಲ್ಲಿ ಸಂತ್ರಸ್ತರು ಆರ್ಥಿಕ ನಿರೀಕ್ಷೆಯಲ್ಲಿದ್ದಾರೆ, ಆದರೆ ಬಿಜೆಪಿಗರು ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದಾರೆ, ಸಿಎಂ ಹೈಕಮಾಂಡ್ ಆದೇಶದ ನಿರೀಕ್ಷೆಯಲ್ಲಿದ್ದಾರೆ!
ಜನರನ್ನ ಕೇಳುವವರಾರು? pic.twitter.com/zD3kXDBXfm
— Karnataka Congress (@INCKarnataka) July 29, 2021