ದೆಹಲಿ: ಬಿಟ್ ಕಾಯೊನ್ ಹಗರಣ ಕುರಿತಂತೆ ರಾಜಕೀಯದಲ್ಲಿ ಭಾರೀ ಚರ್ಚೆ ನಡೆದಿರುವಾಗಲೇ ಎಐಸಿಸಿ ನಾಯಕ ರಣದೀಪ್ ಸಿಂಗ್ ಸುರ್ಜಿವಾಲ ಅವರು ರಾಷ್ಟ್ರ ರಾಜಧಾನಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಕೋಲಾಹಲ ಎಬ್ಬಿಸಿದ್ದಾರೆ. ಹ್ಯಾಕರ್ ಶ್ರೀಕಿ ಬಂಧನ, ಬಿಡುಗಡೆ, ಬಿಟ್ ಕಾಯಿನ್ ನಾಪತ್ತೆ, ಸರ್ಕಾರಿ ವೆಬ್ಸೈಟ್ ಹ್ಯಾಕಿಂಗ್, ವಿವಿಧ ಹಣಕಾಸು ವಹಿವಾಟುಗಳ ಜಾಲತಣಗಳಿಗೆ ಕಣ್ಣ ಹಾಕಿರುವ ಪ್ರಕರಣಗಳ ಬಗ್ಗೆ ಆರೋಪ ಮಾಡಿರುವ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾಗ ಅವರ ಉಸ್ತುವಾರಿಯಲ್ಲೇ ಹಗರಣ ನಡೆದಿದೆ ಎಂದು ದೂರಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದದಲ್ಲಿ ಈ ಹಗರಣ ಕುರಿತು ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು. ರಣದೀಪ್ ಸಿಂಗ್ ಸುರ್ಜಿವಾಲ ಅವರ ಸುದ್ದಿಗೋಷ್ಟಿಯ ತುಣುಕು ಇಲ್ಲಿದೆ.
LIVE – Press Briefing by Shri @rssurjewala Prof. @GouravVallabh & Shri @lawyerkhanmd https://t.co/JA2Elr5ViA
— AICC Communications (@AICCMedia) November 13, 2021